ಮನೆ ಸಾಹಿತ್ಯ ಒಂದೇ ಶಬ್ದದಲ್ಲಿ ಧರ್ಮದ ಸಾರ

ಒಂದೇ ಶಬ್ದದಲ್ಲಿ ಧರ್ಮದ ಸಾರ

0

ಒಬ್ಬ ಗವರ್ನರ್ ತಮ್ಮ ಎಂದಿನ ಪ್ರಯಾಣ ಕಾರ್ಯದಲ್ಲಿ ತೊಡಗಿದ್ದರು. ದಾರಿಯಲ್ಲಿ ಅವನು ಗುರುಗಳಿಗೆ ಗೌರವವನ್ನು ಅರ್ಪಿಸಲು ಬಂದರು.

“ನನಗೆ ಉದ್ದನೆಯ ಭಾಷಣಗಳಿಗೆ ಸಮಯವಿಲ್ಲ ರಾಜ್ಯದ ಕೆಲಸ ಬಹಳಷ್ಟು ಇದೆ. ನನ್ನಂತಹ ಬಿಡುವಿಲ್ಲದ ವ್ಯಕ್ತಿಗೆ ನೀವು ಧರ್ಮದ ಕುರಿತು ಒಂದು ಅಥವಾ ಎರಡು ಪ್ಯಾರಾದಲ್ಲಿ ಹೇಳುತ್ತೀರಾ?” ಗುರುಗಳು, “ನಿಮಗಾಗಿ ನಾನು ಒಂದು ಶಬ್ದದಲ್ಲಿ ಹೇಳಬಲ್ಲೆ” ಎಂದು ಹೇಳಿದರು. “ಅದ್ಭುತ ! ಆ ಅಸಾಮಾನ್ಯ ಶಬ್ದವೇನು?” ಎಂದು ರಾಜ್ಯಪಾಲರು ಕೇಳಿದರು.  “ಮೌನ” ಎಂದು ಗುರುಗಳು ಹೇಳಿದರು. “ಮೌನಕ್ಕೆ ದಾರಿಯೇನು?” “ಧ್ಯಾನ”,  “ಧ್ಯಾನ ಎಂದರೇನು ಕೇಳಬಹುದೇ” ಆಗ ಗುರುಗಳು ಹೀಗೆಂದು ಉತ್ತರಿಸಿದರು.

ಪ್ರಶ್ನೆಗಳು :-

1.ಗುರುಗಳ ಉತ್ತರ ಏನಾಗಿತ್ತು ?ಈ ಕಥೆಯ ನೀತಿವೇನು?

ಉತ್ತರಗಳು :-

1.”ಮೌನ” ಎಂದು ಗುರುಗಳು ಮತ್ತೆ ಉತ್ತರಿಸಿದರು.

2. ಇಲ್ಲಿ ಮೌನ ಎಂದರೆ ಆಂತರಿಕ ಮತ್ತು ಬಾಹ್ಯ ಮೌನ. ಧ್ಯಾನಕಾಲದಲ್ಲಿ ಸಾಮಾನ್ಯವಾಗಿ ಬಹಳ ಬಾಹ್ಯ ಮೌನವನ್ನು ನಿರ್ವಹಿಸುತ್ತಾರೆ. ಒಬ್ಬ ವ್ಯಕ್ತಿಯು ಇತರೆ ಜನರೊಂದಿಗೆ ಬರಹ ಅಥವಾ ಮೌಖಿಕ ರೂಪದಲ್ಲಿ ವ್ಯವಹರಿಸದಿದ್ದಾಗ ಬಾಹ್ಯ ಮೌನ ಉಂಟಾಗುತ್ತದೆ. ಬಹಳ ಮೌನವೆಂದರೆ ಧ್ಯಾನದಲ್ಲಿ ಆಂತರಿಕ ಮೌನವಿರಬೇಕು. ಮನಸ್ಸಿನಲ್ಲಿ ಒಳಮಾತನ್ನು ನಿಲ್ಲಿಸುವುದೇ ಧ್ಯಾನದ ಉದ್ದೇಶ. ಒಳ ಮಾತಿನಲ್ಲಿ ವಿಷಯಗಳು ಪ್ರಸ್ತಕಾ ಅಥವಾ ಪೂರ್ವಕ್ಕೆ ಸಂಬಂಧಿಸಿದಂತೆ ಧ್ಯಾನವು ಪ್ರತಿದಿನ ಒಂದು ನಿರ್ದಿಷ್ಟ ಸಮಯದಲ್ಲಿ, ಪ್ರತಿಯೊಬ್ಬರು ಸದಾ ಕಾಡುವ ಹಲವಾರು ವಿಷಯಗಳನ್ನು ತೊಡೆದು ಹಾಕುತ್ತದೆ. ಪ್ರಪಂಚದ ಪ್ರತಿದಿನದ ಸದ್ದನ್ನು ಸ್ಥಬ್ಧೀಕರಿಸುವುದೇ ಮನಸ್ಸಿನ ಮೌನ ಅಥವಾ ಸ್ಥಬ್ಧತೆ.