ಮನೆ ರಾಜ್ಯ ಮಾವುತ ಹಾಗೂ ಕಾವಾಡಿಗ ಕುಟುಂಬದ ಮಹಿಳೆಯರಿಗ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಸೀರೆ ವಿತರಣೆ

ಮಾವುತ ಹಾಗೂ ಕಾವಾಡಿಗ ಕುಟುಂಬದ ಮಹಿಳೆಯರಿಗ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಸೀರೆ ವಿತರಣೆ

0

ಮೈಸೂರು: ದಸರಾ ಗಜಪಡೆಗಳೊಂದಿಗೆ ಆಗಮಿಸಿರುವ ಮಾವುತ ಮತ್ತು ಕಾವಡಿಗಳ ಕುಟುಂಬದ ಮಹಿಳೆಯರಿಗೆ ಶ್ರೀ ದುರ್ಗಾ ಫೌಂಡೇಶನ್ ಸದಸ್ಯರು, ಅರಿಶಿನ ಕುಂಕುಮ ವಿಳೆದೆಲೆ ಬಾಳೆಹಣ್ಣು ಹಾಗೂ ಸೀರೆ ವಿತರಿಸಿದರು.

ಬಳಿಕ ಮಾತನಾಡಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ದೇವಿ ಪ್ರಜ್ಞೆ, ತಾಯಿ ಪ್ರಜ್ಞೆ , ಮತ್ತು ಪ್ರಕೃತಿಯ ಅರಿವಿನ ಹಬ್ಬವೇ ನವರಾತ್ರಿ. ನವರಾತ್ರಿಯ ಮೂಲಕ ಪ್ರಕೃತಿಗೆ ನಮಿಸಿ ಪ್ರಕೃತಿಯ ಶಕ್ತಿ ತಾಯಿ ದುರ್ಗಾ ಮಾತೆಯನ್ನು ಸರ್ವ ಸ್ತ್ರೀಯರಲ್ಲೂ ಕಾಣುವುದೇ ನವರಾತ್ರಿ.  ಭಾರತೀಯ ಸನಾತನ ಧರ್ಮದಲ್ಲಿ ನವರಾತ್ರಿಗೆ ಅಪಾರ ಶಕ್ತಿ ಇದ್ದು 9 ದಿನಗಳ ಕಾಲ ಅಂತರಿಕ ದ್ವೇಷ, ಅಸೂಯೆ ತೊಲಗಿಸಿ ದೈವೀಪ್ರಜ್ಞೆಯನ್ನು ಜಾಗೃತಗೊಳಿಸುವುದೇ ನವರಾತ್ರಿಯ ವಿಶೇಷತೆ ಎಂದರು.

ನವದುರ್ಗ ಸ್ವರೂಪದಲ್ಲಿರುವ ಎಲ್ಲಾ ಗೌರವದ ಮಾತೆಯರಿಗೆ  ವಂದಿಸಿ ನಮ್ಮ ವಾತಾವರಣದಲ್ಲಿ ಸಕಾರಾತ್ಮಕ ವಾದಂತಹ ಯೋಚನಾಲಹರಿಯನ್ನು ಜಾಗೃತಗೊಳಿಸುವುದೇ ಅಲ್ಲದೆ ನವ ಚೈತನ್ಯವನ್ನು ಹೆಚ್ಚಿಸುತ್ತದೆ. ದುರ್ಗಾ ಮಾತೆಯನ್ನು ಪೂಜಿಸುವುದು, ನವ ಕನ್ನಿಕೆಯರ ಪೂಜೆ, ಆಯುಧ ಪೂಜೆ, ವಿಶೇಷವಾಗಿದೆ ಎಂದರು.

9 ಮಾತೆಯರಲ್ಲೂ ವಿಶೇಷ ಶಕ್ತಿಗಳಿದ್ದು ದುಷ್ಟ ಶಕ್ತಿಯನ್ನು ರಾಕ್ಷಸ ಪ್ರವೃತ್ತಿಯನ್ನು ನಾಶಗೊಳಿಸಿ, ಮಾನವ ಜನ್ಮವನ್ನು ಶಕ್ತಿಗೊಳಿಸುವ ವಾತಾವರಣವನ್ನು ಸೃಷ್ಟಿಸಿರುವ ಜಗನ್ಮಾತೆಗೆ ನಾವೆಲ್ಲರೂ ಸದಾ ಋಣಿಯಾಗಿರಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ  ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ಅಧ್ಯಕ್ಷರಾದ ರಂಜಿತಾ ಸುಬ್ರಹ್ಮಣ್ಯ, ಸಮತ್ವಂ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ವನಮಾಲ, ಪದ್ಮ, ಜೀವದಾರ ರಕ್ತಾ ನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹಾಗೂ ಮುತ್ತಣ್ಣ, ಉದ್ಯಮಿ ಬಸವರಾಜ ಪೂಜಾರಿ, ವೀಣಾ, ಹಾಗೂ ಇನ್ನಿತರರು ಹಾಜರಿದ್ದರು.