ಮನೆ ಸುದ್ದಿ ಜಾಲ ಸಾಂಸ್ಕೃತಿಕ ನಗರಿಗೆ ಲಗ್ಗೆಯಿಟ್ಟ ಹಣ್ಣುಗಳ ರಾಜ ಮಾವು

ಸಾಂಸ್ಕೃತಿಕ ನಗರಿಗೆ ಲಗ್ಗೆಯಿಟ್ಟ ಹಣ್ಣುಗಳ ರಾಜ ಮಾವು

0

ಮೈಸೂರು (Mysuru)- ಹಣ್ಣುಗಳ ರಾಜ ಮಾವು (Mango) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಾವಿನ ಹಣ್ಣನ್ನು ಎಲ್ಲರು ಇಷ್ಟಪಟ್ಟು ತಿನ್ನುತ್ತಾರೆ. ಮಾವಿನ ಹಣ್ಣನ್ನು ತಿನ್ನುತ್ತಿದ್ದರೆ ಮತ್ತಷ್ಟು ತಿನ್ನಬೇಕು ಎನ್ನಿಸುತ್ತಿದೆ. ಹೀಗಾಗಿ ಮಾವಿನ ಪ್ರಿಯರ ಸಂಖ್ಯೆ ಹೆಚ್ಚು ಎಂದರೇ ತಪ್ಪಾಗಲಾರದು.

ಇದೀಗ ಮಾವಿನ ಸೀಸನ್‌ ಪ್ರಾರಂಭವಾಗಿದ್ದು, ಸಾಂಸ್ಕೃತಿಕ ನಗರಿಗೆ ಮಾವು ಲಗ್ಗೆಯಿಟ್ಟಿದೆ. ನಗರದ ರಸ್ತೆ, ರಸ್ತೆಗಳಲ್ಲೂ ಮಾವಿನ ಹಣ್ಣಿನ ಮಾರಾಟ ಭರ್ಜರಿಯಾಗಿ ಸಾಗುತ್ತಿದೆ.

ರಸಪೂರಿ, ಬಾದಾಮಿ, ಮಲಗೋವಾ, ಮಲ್ಲಿಕಾ, ಕಸಿ ಮಾವು ಸೇರಿದಂತೆ ಹಲವು ತಳಿಗಳ ಮಾವು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಸಹಜವಾಗೇ ಮಾವಿಗೆ ಬೇಡಿಕೆ ಹೆಚ್ಚಾಗಿದೆ.

ದುಬಾರಿ ಬೆಲೆಯ ನಡುವೆಯೂ ಮಾವು ಖರೀದಿಸಲು ಗ್ರಾಹಕರು ಮುಂದಾಗಿದ್ದಾರೆ. ಮಾವು ಕೆಜಿಗೆ 160 ರೂ. ನಂತೆ ಮಾರಾಟವಾಗುತ್ತಿದೆ. ಮಾವಿನ ಹಣ್ಣುಗಳ ಮಾರಾಟ ಜೋರಾಗಿರುವುದರಿಂದ ಮಾವು ವ್ಯಾಪಾರಸ್ಥರು ಸಂತಸವಾಗಿದ್ದಾರೆ.