ಮನೆ ರಾಷ್ಟ್ರೀಯ ಕೊರೊನಾ 4ನೇ ಅಲೆ ಭೀತಿ: ಇಂದು ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸಭೆ

ಕೊರೊನಾ 4ನೇ ಅಲೆ ಭೀತಿ: ಇಂದು ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸಭೆ

0

ನವದೆಹಲಿ (New Delhi )- ದೇಶದಲ್ಲಿ ಕೊರೊನಾ (Corona) ವೈರಸ್ ಸೋಂಕಿನ 4ನೇ ಅಲೆಯ ಆತಂಕ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿ (Prime Minister) ನರೇಂದ್ರ ಮೋದಿ (Narendra Modi) ಅವರು ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಇಂದು ಸಭೆ ನಡೆಸಲಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಈ ವೇಳೆ ಆಯಾ ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕೋವಿಡ್‌ ಸ್ಥಿತಿಗತಿ ನಿರ್ವಹಣೆಯ ಕಾರ್ಯತಂತ್ರದ ಕುರಿತು ಸಮಗ್ರ ಸಮಾಲೋಚನೆ ನಡೆಯಲಿದೆ.

ಕೊರೊನಾ ವೈರಸ್‌ನ ಹಾವಳಿ ಶುರುವಾದ ದಿನದಿಂದ ಹಿಡಿದು ಇಲ್ಲಿಯವರೆಗೂ ದೇಶಾದ್ಯಂತ ಒಟ್ಟು 5,23,622 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಕೊರೊನಾ 4ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಭಾರತ ಸಜ್ಜಾಗಬೇಕಾದ ಅನಿವಾರ್ಯತೆ ಇದೆ. ಈ ಕಾರಣದಿಂದಾಗಿ ಬುಧವಾರ ನಡೆಯಲಿರುವ ಸಿಎಂಗಳ ಜೊತೆಗಿನ ಪಿಎಂ ಮೀಟಿಂಗ್ ಭಾರೀ ಕುತೂಹಲ ಕೆರಳಿಸಿದೆ.

ಏ.24 ರಂದು ಪ್ರಧಾನಿ ಮೋದಿ ಅವರು ಮನ್‌ ಕಿ ಬಾತ್ ಕಾರ್ಯಕ್ರಮದಲ್ಲೂ ಜನತೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದಿದ್ದರು. ರಂಜಾನ್, ಅಕ್ಷಯ ತೃತೀಯ, ಭಗವಾನ್ ಪರಶುರಾಮ ಜನ್ಮ ಜಯಂತಿ, ವೈಶಾಖಾ ಬುದ್ಧ ಪೌರ್ಣಮಿ ಸೇರಿದಂತೆ ಹಲವು ಹಬ್ಬಗಳ ಸರಣಿ ಎದುರಾಗಲಿದ್ದು, ಹಬ್ಬಗಳ ಆಚರಣೆ ವೇಳೆ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ, ಸಂಭಾವ್ಯ ನಾಲ್ಕನೇ ಅಲೆಯನ್ನು ಯಶಸ್ವಿಯಾಗಿ ಎದುರಿಸುವ ಜೊತೆಯಲ್ಲೇ, ಸಾಧ್ಯವಾದಷ್ಟೂ ಸೋಂಕಿನ ಸರಪಳಿಯನ್ನು ತುಂಡರಿಸಲು ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು.

ಇನ್ನು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 2,483 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಇದುವರೆಗೂ ದೃಢಪಟ್ಟ ಒಟ್ಟು ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 4,30,62,569ಕ್ಕೆ ಏರಿಕೆ ಕಂಡಿದೆ. ಇನ್ನು ದೇಶಾದ್ಯಂತ ಒಟ್ಟು 15,636 ಸಕ್ರಿಯ ಪ್ರಕರಣಗಳಿವೆ.


ಹಿಂದಿನ ಲೇಖನಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟ
ಮುಂದಿನ ಲೇಖನಸಾಂಸ್ಕೃತಿಕ ನಗರಿಗೆ ಲಗ್ಗೆಯಿಟ್ಟ ಹಣ್ಣುಗಳ ರಾಜ ಮಾವು