ಮನೆ ಸುದ್ದಿ ಜಾಲ ಬೈಬಲ್ ಅಧ್ಯಯನ ಮಾಡಲು ಒತ್ತಾಯ: ಬೆಂಗಳೂರಿನ ಕ್ಲಾರೆನ್ಸ್ ಶಾಲೆಗೆ ನೋಟಿಸ್ ಜಾರಿ

ಬೈಬಲ್ ಅಧ್ಯಯನ ಮಾಡಲು ಒತ್ತಾಯ: ಬೆಂಗಳೂರಿನ ಕ್ಲಾರೆನ್ಸ್ ಶಾಲೆಗೆ ನೋಟಿಸ್ ಜಾರಿ

0

ಬೆಂಗಳೂರು(Bengaluru): ಪಠ್ಯಕ್ರಮದ ಭಾಗವಾಗಿ ಬೈಬಲ್(Bible) ಅನ್ನು ಅಧ್ಯಯನ(Study) ಮಾಡಲು ಒತ್ತಾಯಿಸಿದ(Force) ಕಾರಣಕ್ಕಾಗಿ ಬೆಂಗಳೂರಿನ ಕ್ಲಾರೆನ್ಸ್ ಶಾಲೆಗೆ(Clarence School)) ನೋಟಿಸ್(Notice) ಜಾರಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ(Education Minister) ಬಿ.ಸಿ.ನಾಗೇಶ್ ( B.C.Nagesh)ಮಾಹಿತಿ ನೀಡಿದ್ದಾರೆ.    
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಧಾರ್ಮಿಕ ವಿಚಾರ ಬೋಧನೆ ಮಾಡುವಂತಿಲ್ಲ. ಆದರೆ ಶಾಲೆಯು ಬೈಬಲ್ ಅಧ್ಯಯನಕ್ಕೆ ಒತ್ತಾಯಿಸಿರುವುದು ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ. ಹೀಗಾಗಿ ಶಾಲೆಯ ವಿರುದ್ಧ ನೊಟೀಸ್ ಜಾರಿ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ನೋಂದಣಿಯಾಗಿರುವ ಯಾವುದೇ ಶಿಕ್ಷಣ ಸಂಸ್ಥೆಗಳು ಕರ್ನಾಟಕ ಶಿಕ್ಷಣ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ ಮತ್ತು ಪಠ್ಯಕ್ರಮದ ಭಾಗವಾಗಿ ಧಾರ್ಮಿಕ ಪುಸ್ತಕವನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳನ್ನು ಒತ್ತಾಯಿಸುವಂತಿಲ್ಲ ಎಂದು ತಿಳಿಸಿದ್ದಾರೆ.

ಬೈಬಲ್ ಅನ್ನು ತಮ್ಮ ಪಠ್ಯಕ್ರಮದ ಭಾಗವಾಗಿಸುವ ಬಗ್ಗೆ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದ್ದಾರೆ, ಇದಕ್ಕಾಗಿ ನೋಟಿಸ್ ಜಾರಿ ಮಾಡಲಾಗಿದ್ದು, ನೋಟಿಸ್’ಗೆ ಉತ್ತರ ನೀಡಬೇಕಿದೆ ಎಂದಿದ್ದಾರೆ.

ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಾಲಾ ಅಧಿಕಾರಿಗಳು, ಕಾನೂನು ಪಾಲನೆ ಮಾಡುವುದಾಗಿ ಹಾಗೂ ಸಮಸ್ಯೆ ಇತ್ಯರ್ಥಪಡಿಸಲು ವಕೀಲರೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.