ಮನೆ ಆಟೋ ಮೊಬೈಲ್ ಭರ್ಜರಿ ಮೈಲೇಜ್ ನೀಡುವ ಟಾಟಾ ಆಲ್ಟ್ರೊಜ್ ಸಿಎನ್ ಜಿ ಬಿಡುಗಡೆ

ಭರ್ಜರಿ ಮೈಲೇಜ್ ನೀಡುವ ಟಾಟಾ ಆಲ್ಟ್ರೊಜ್ ಸಿಎನ್ ಜಿ ಬಿಡುಗಡೆ

0

ಭಾರತದಲ್ಲಿ ಸಿಎನ್ ಜಿ ಕಾರುಗಳ ಮಾರಾಟ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಈ ಹಿನ್ನಲೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿ ಸಹ ತನ್ನ ಪ್ರಮುಖ ಕಾರುಗಳಲ್ಲಿ ಸಿಎನ್ ಜಿ ಆವೃತ್ತಿಗಳನ್ನ ಹೆಚ್ಚಿಸುತ್ತಿದ್ದು, ಇದೀಗ ಆಲ್ಟ್ರೊಜ್ ಕಾರಿನಲ್ಲೂ ಹೊಸ ಆವೃತ್ತಿ ಬಿಡುಗಡೆ ಮಾಡಿದೆ.

Join Our Whatsapp Group

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಸಿಎನ್ ಜಿ ಕಾರುಗಳ ಅಬ್ಬರವು ಕೂಡಾ ಹೆಚ್ಚಾಗುತ್ತಿದೆ. ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರುಗಳಲ್ಲಿ ಸಿಎನ್ ಜಿ ಆವೃತ್ತಿಗಳನ್ನ ಪರಿಚಯಿಸಲಾಗುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿ ಇದೀಗ ಆಲ್ಟ್ರೊಜ್ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದೆ. 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಹೊಸ ಕಾರನ್ನು ಟಾಟಾ ಕಂಪನಿ ಇದೀಗ ಅಧಿಕೃತವಾಗಿ ಪರಿಚಯಿಸಿದೆ.

ಹೊಸ ಆಲ್ಟ್ರೊಜ್ ಸಿಎನ್ ಜಿ ಕಾರು ಮಾದರಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ವಿವಿಧ ವೆರಿಯೆಂಟ್ ಗಳಲ್ಲಿ ಬಿಡುಗಡೆಯಾಗಿದೆ. ಹೊಸ ಸಿಎನ್ ಜಿ ಕಾರು ಪ್ರಮುಖ ಮೂರು ವೆರಿಯೆಂಟ್ ಗಳನ್ನು ಹೊಂದಿದ್ದು, ಇವು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10.55 ಲಕ್ಷ ಬೆಲೆ ಪಡೆದುಕೊಂಡಿದೆ. ಇದು ಸಾಮಾನ್ಯ ಪೆಟ್ರೋಲ್ ಮಾದರಿಯ ಬೆಲೆಗಿಂತ ರೂ. 90 ಸಾವಿರದಷ್ಟು ದುಬಾರಿಯಾಗಿದ್ದು, ಹಲವಾರು ಹೊಸ ವೈಶಿಷ್ಟ್ಯತೆಗಳನ್ನ ಪಡೆದುಕೊಂಡಿದೆ.

ಹೊಸ ಆಲ್ಟ್ರೊಜ್ ಸಿಎನ್ ಜಿ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಐಸಿಎನ್ ಜಿ ತಂತ್ರಜ್ಞಾನ ಜೋಡಣೆ ಮಾಡಲಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 88 ಹಾರ್ಸ್ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಮೂಲಕ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಿಂತಲೂ ಉತ್ತಮ ಕಾರ್ಯಕ್ಷಮತೆ ಹೊಂದಿದ್ದು, ಪ್ರತಿ ಕೆಜಿ ಸಿಎನ್ ಜಿಗೆ ಬರೋಬ್ಬರಿ 28 ರಿಂದ 30 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.

ಇದರೊಂದಿಗೆ ಹೊಸ ಕಾರಿನಲ್ಲಿರುವ ಡ್ಯುಯಲ್ ಸಿಎನ್ ಜಿ ಸಿಲಿಂಡರ್ ಜೋಡಣೆಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಸಾಮಾನ್ಯ ಕಾರಿನಲ್ಲಿರುವಂತೆ ಬೂಟ್ ಸ್ಪೆಸ್ ಲಭ್ಯವಿರಲಿದೆ. ಸಾಮಾನ್ಯವಾಗಿ ಸಿಎನ್ ಜಿ ಕಾರುಗಳಲ್ಲಿ ಕಡಿಮೆ ಬೂಟ್ ಸ್ಪೆಸ್ ಹೊಂದಿರುವುದು ಕೆಲವು ಗ್ರಾಹಕರಲ್ಲಿ ಅಸಮಾಧಾನವಿದ್ದು, ಈ ಹಿನ್ನಲೆಯಲ್ಲಿ ಟಾಟಾ ಕಂಪನಿ ಡ್ಯುಯಲ್ ಸಿಲಿಂಡರ್ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಹೊಸ ಆಲ್ಟ್ರೊಜ್ ಸಿ ವರ್ಷನ್ ನಲ್ಲಿ ಹಲವಾರು ಪ್ರಿಮಿಯಂ ಫೀಚರ್ಸ್ ನೀಡಿದ್ದು, ಟಾಪ್ ಎಂಡ್ ವೆರಿಯೆಂಟ್ ನಲ್ಲಿ ಸನ್ ರೂಫ್ ಸೌಲಭ್ಯವನ್ನು ಜೋಡಣೆ ಮಾಡಿದೆ. ಜೊತೆಗೆ ಹೊಸ ಕಾರು ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಐ-ಸಿಎನ್ ​ಜಿ ತಂತ್ರಜ್ಞಾನವು ಟಾಟಾ ಕಂಪನಿಗೆ ಭರ್ಜರಿ ಬೇಡಿಕೆ ತಂದುಕೊಡುತ್ತಿದೆ. ಈ ಮೂಲಕ ಹೊಸ ಕಾರು ಮಾರುತಿ ಬಲೆನೊ ಸಿಎನ್ ಜಿ ಮತ್ತು ಟೊಯೊಟಾ ಗ್ಲಾಂಝಾ ಸಿಎನ್ ಜಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಕಾರುಗಳು ಸಿಎನ್ ಜಿ ವರ್ಷನ್ ನಲ್ಲಿ ಬಿಡುಗಡೆಯಾಗಲಿವೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಪೊನ್ನಿಯಿನ್ ಸೆಲ್ವನ್- 2 ಸಿನಿಮಾ ಜೂನ್ 2 ರಂದು ಒಟಿಟಿಯಲ್ಲಿ ಬಿಡುಗಡೆ