ಮನೆ ಸ್ಥಳೀಯ ದಸರಾ ಪಾಸ್ ವಿತರಣೆ

ದಸರಾ ಪಾಸ್ ವಿತರಣೆ

0

ಮೈಸೂರು: ನಾಡಹಬ್ಬ ಮೈಸೂರು ದಸರಾ ೨೦೨೩ರ ಹಿನ್ನೆಲೆಯಲ್ಲಿ ಅಕ್ಟೋಬರ್ ೨೪ ರಂದು ನಡೆಯುವ ಜಂಬೂಸವಾರಿ ಮತ್ತು ಪಂಜಿನ ಕವಾಯಿತು ವೀಕ್ಷಣೆಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಗಳನ್ನು ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ ೧೮ ರಂದು ಬೆಳಗ್ಗೆ ೧೦ ಗಂಟೆಗೆ ಆನ್ ಲೈನ್ ಮೂಲಕ ಖರೀದಿ ಮಾಡಲು ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಯಿತು.

Join Our Whatsapp Group

ಲಭ್ಯತೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗಿದ್ದ ಒಟ್ಟು ೧೦೦೦ ಗೋಲ್ಡ್ ಕಾರ್ಡ್ ಹಾಗೂ ಜಂಬೂಸವಾರಿ ಮತ್ತು ಪಂಜಿನ ಪ್ರದರ್ಶನದ ತಲಾ ೨೦೦೦ ಟಿಕೆಟ್ ಗಳು ಕೇವಲ ಒಂದು ತಾಸಿನ ಅವಧಿ ಒಳಗೆ ಆನ್ ಲೈನ್ ಮೂಲಕ ಮಾರಾಟವಾಗಿದೆ.

ಅರಮನೆ ಆವರಣದೊಳಗೆ ದಸರಾ ಮೆರವಣಿ ವೀಕ್ಷಣೆಯ ೩೦೦೦ ಮುಖ ಬೆಲೆಯ ಒಟ್ಟು ೪೦೦ ಟಿಕೆಟ್ ಗಳು ಹಾಗೂ ೨,೦೦೦ಗಳ ಒಟ್ಟು ೬೦೦ ಟಿಕೆಟ್ ಗಳು ಮತ್ತು ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಮೈದಾನದ ೫೦೦ ಮುಖಬೆಲೆಯ ಒಟ್ಟು ೧೦೦೦ ಟಿಕೆಟ್ ಗಳು ಮಾರಾಟವಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.