ಮನೆ ಮನರಂಜನೆ ಕಾನ್ ಫೆಸ್ಟಿವಲ್ ತೀರ್ಪುಗಾರರಾಗಿ ನಟಿ ದೀಪಿಕಾ ಪಡುಕೋಣೆ

ಕಾನ್ ಫೆಸ್ಟಿವಲ್ ತೀರ್ಪುಗಾರರಾಗಿ ನಟಿ ದೀಪಿಕಾ ಪಡುಕೋಣೆ

0

ಮುಂಬೈ(Mumbai): 2022ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ(Con Film Festival) ತೀರ್ಪುಗಾರರಾಗಿ(Judge) ಬಾಲಿವುಡ್(Bollywood) ನಟಿ(Actor) ದೀಪಿಕಾ ಪಡುಕೋಣೆ(Deepika Padukone) ಯವರು ಕಾರ್ಯನಿರ್ವಹಿಸಲಿದ್ದಾರೆ.

ಈ ಕುರಿತು ಟ್ವಿಟರ್ ಮೂಲಕ ಮಾಹಿತಿ ನೀಡಿರುವ ಸಂಘಟಕರು, ಮೇ 17ರಿಂದ 28ರವರೆಗೆ 75ನೇ ಕಾನ್ ಚಲನಚಿತ್ರೋತ್ಸವ ನಡೆಯಲಿದೆ ಎಂದು ಪ್ರಕಟಿಸಿದ್ದಾರೆ.

21 ಸಿನಿಮಾಗಳು ಪ್ರಶಸ್ತಿ ಸುತ್ತಿನಲ್ಲಿದ್ದು, ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರು ಮುಖ್ಯ ತೀರ್ಪುಗಾರರಾಗಿರಲಿದ್ದಾರೆ. ದೀ‍ಪಿಕಾ ಅವರು ಎಂಟು ಮಂದಿ ತೀರ್ಪುಗಾರರ ತಂಡದಲ್ಲಿರುತ್ತಾರೆ. ಮೇ 28ರಂದು ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಘೋಷಣೆ ಕಾರ್ಯಕ್ರಮ ಇರಲಿದೆ.