ಬೆಂಗಳೂರು: ಬಿಜೆಪಿ ಪಕ್ಷ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿ, ವಾಗ್ದಾಳಿ ನಡೆಸಿದೆ. ಬಿಜೆಪಿ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ ಗಳನ್ನು ಮಾಡಿದೆ. ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ.
ರಾಜ್ಯಕ್ಕೆ ಹೈಕಮಾಂಡ್ ನ ಕಲೆಕ್ಷನ್ ಏಜೆಂಟ್ ಗಳಾದ ಸುರ್ಜೇವಾಲ, ವೇಣುಗೋಪಾಲ್ ಬಂದಿದ್ದರು. ಅವರು ನಿಗಮ ಮಂಡಳಿ ನೇಮಕಕ್ಕೆ ರೇಟ್ ಕಾರ್ಡ್ ಫಿಕ್ಸ್ ಮಾಡಿದ್ದಾರೆ. ಕಾಂಗ್ರೆಸ್ ಸ್ನೇಹಿತರು ಕೊಟ್ಟ ನಿಗಮ ಮಂಡಳಿಗಳ ರೇಟ್ ಕಾರ್ಡ್ ಇಂತಿದೆ ಎಂದು ಟ್ವೀಟ್ನಲ್ಲಿ ಬಿಜೆಪಿ ಪಟ್ಟಿ ನೀಡಿದೆ.
ಬಿಡಿಎಗೆ 50 ಕೋಟಿ ರೂಪಾಯಿ, BWSSBಗೆ 45 ಕೋಟಿ ರೂಪಾಯಿ, ಕೆಆರ್ ಐಡಿಎಲ್ ಗೆ 20 ಕೋಟಿ ರೂಪಾಯಿ, ಕಿಯೋನಿಕ್ಸ್-₹15 ಕೋಟಿ, ಕರ್ನಾಟಕ ಉಗ್ರಾಣ ನಿಗಮ-₹12 ಕೋಟಿ, ಬಿಎಂಟಿಸಿಗೆ 10 ಕೋಟಿ ರೂ. ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.
ಹತ್ತು ಹಲವು ನಿಗಮಗಳಿಗೆ ಕಲೆಕ್ಷನ್ ಮಾಸ್ಟರ್ಸ್ ಗಳಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಸಿ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚು ಮೊತ್ತದ ಕಲೆಕ್ಷನ್ ಸಾಧ್ಯತೆ ಇದೆಯಂತೆ. ಜನರ ಶ್ರಮದ ದುಡಿಮೆಯ ಹಣವನ್ನು ವಲಯವಾರು ಲೂಟಿ ಮಾಡಿ ಹೈಕಮಾಂಡ್ ಗೆ ತಲುಪಿಸುತ್ತಿರುವ ಕಲೆಕ್ಷನ್ ಮಾಸ್ಟರ್ ಗಳು ಎಂದು ಬಿಜೆಪಿ ಕಿಡಿಕಾರಿದೆ.
ಕಾಂಗ್ರೆಸ್ ತಿರುಗೇಟು
ಬಿಜೆಪಿ ಟ್ವೀಟ್ ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸೋಲಿನ ಹತಾಶೆ, ಶೂನ್ಯ ನಾಯಕತ್ವದಿಂದಾಗಿ ಬಿಜೆಪಿಗೆ ದೃಷ್ಟಿ ದೋಷ ಉಂಟಾಗಿದೆ. ಕಣ್ಣು ಕುರುಡಾದ ಕಾರಣ ಬೇರೆಯವರನ್ನ ಕಾಣೆಯಾಗಿದ್ದಾರೆ ಎನ್ನುತ್ತಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕುರುಡುತನ ಸರಿಪಡಿಸಿಕೊಳ್ಳಲಿ. ಶೀಘ್ರವೇ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬರಲಿ. ದೃಷ್ಟಿ ದೋಷ ಸರಿಹೋಗಲಿ ಎಂದು ಹಾರೈಸುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟಿ ನೀಡಿದೆ.
ನಿಮ್ಮ ಅಧ್ಯಕ್ಷರಿಗೆ ಅಹಂಕಾರದ ಮದ ಏರಿ ಕಣ್ಣು ಕಾಣಿಸದಿರಬಹುದು. ಡಿಕೆಯನ್ನು ಜೈಲಿಗೆ ಕಳಿಸಲು ನಿಮ್ಮಲ್ಲೇ ಪ್ಲಾನ್ ಬಿ ರೆಡಿ ಇದೆಯಂತೆ? ಕಣ್ಣು ಬಿಟ್ಟು ನೋಡಿ, ಕಾಣದಿದ್ರೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ. ಮಿಂಟೋ ಆಸ್ಪತ್ರೆಯಲ್ಲಿ ಗು ಗುಣವಾಗಲಿಲ್ಲ ಅಂದರೆ ನನ್ನ ಕಚೇರಿಗೆ ಬನ್ನಿ. ನಿಮ್ಮ ಕಣ್ಣಿಗೆ ಉಚಿತ ಖಚಿತ ಹಾಗೂ ನಿಶ್ಚಿತವಾಗಿ ಚಿಕಿತ್ಸೆ ಕೊಡಿಸುತ್ತೇನೆ ಎಂದಿದೆ.