ಮನೆ ಸ್ಥಳೀಯ ಕಲಾವಿದರ ಶ್ರಮ ಕಲಾವಿದರಿಗೆ ಗೊತ್ತು: ಪ್ರಥಮ್

ಕಲಾವಿದರ ಶ್ರಮ ಕಲಾವಿದರಿಗೆ ಗೊತ್ತು: ಪ್ರಥಮ್

0

ಮೈಸೂರು: ಕಲಾವಿದರ ಪರಿಸರವು ಯಾರಿಗೂ ತಿಳಿಯುವುದಿಲ್ಲ ತೆರೆಯ ಮೇಲೆ ಕಾಣಿಸಿಕೊಂಡಂತೆ ತೆರೆಯ ಹಿಂದೆ ಕಲಾವಿದರ ಬದುಕು ಇರುವುದಿಲ್ಲ ಪ್ರತಿಯೊಬ್ಬರ ಜೀವನ ಸರಿ ಹೋಗಿದ್ದಾರೆ ಎಂದು ಚಲನಚಿತ್ರ ನಟ ಪ್ರಥಮ್ ತಿಳಿಸಿದರು

ಇಂದು ನಗರದ ಐನಾಕ್ಸ್ ಚಿತ್ರಮಂದಿರದಲ್ಲಿ ಕಿರು ಚಿತ್ರ ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕಮರ್ಷಿಯಲ್ ಚಿತ್ರವನ್ನು ತೆಗೆಯುವುದು ಸುಲಭದಲ್ಲಿ ಅದರಂತೆ ಕಿರು ಚಿತ್ರಗಳನ್ನು ನಿರ್ಮಿಸುವುದು ಕೂಡ ಕಷ್ಟ ಸಾಧ್ಯ, ಪ್ರತಿಯೊಬ್ಬ ಕಲಾವಿದನ ಬದುಕು ಕೂಡ ಬೇರೆ ಬೇರೆ ರೀತಿಯ ಆಯಾಮಗಳನ್ನು ಪಡೆದುಕೊಂಡಿರುತ್ತದೆ ಎಂದು ತಿಳಿಸಿದರು.

ನನ್ನ ಚಿತ್ರದಲ್ಲಿ ಹಿರಿಯ ಕಲಾವಿದರು ಕೂಡ ಜೊತೆಗೂಡಿದ್ದಾರೆ ಇದು ನನಗೆ ಸಂತಸದ ಸಂತಸದ ವಿಚಾರ. ನಟ ರಾಘವೇಂದ್ರ ರಾಜ್ ಕುಮಾರ್ ಕೂಡ ಚಲನಚಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತಿಯನ್ನು ಹೊಂದಿದ್ದರು. ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.

ದಸರಾ ಸಂದರ್ಭದಲ್ಲಿ ಈ ರೀತಿಯ ಕಿರು ಚಿತ್ರ ಪ್ರದರ್ಶನವನ್ನು ಆಯೋಜಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಖುಷಿ ವಿಚಾರ, ಇನ್ನೂ ಹೆಚ್ಚು ಹೆಚ್ಚು ಚಲನ ಚಿತ್ರಗಳು ಕನ್ನಡ ಚಿತ್ರ ರಂಗದಲ್ಲಿ ಮೂಡಿಬರಬೇಕು ಉತ್ತಮ ಕಥೆಗಳೂ ಕೂಡ ಮೂಡಿಬರಬೇಕು.ಕಿರು ಚಿತ್ರಗಳನ್ನು ನಿರ್ಮಾಣ ಮಾಡುವ ನಿರ್ದೇಶಕರು, ಕಲಾವಿದರಿಗೆ ಪ್ರೋತ್ಸಾಹ ನೀಡುವುದರಿಂದ ಕಮರ್ಶಿಯಲ್ ಚಿತ್ರಗಳ ನಿರ್ಮಾಣದ ಕಡೆ ಗಮನ ನೀಡಬಹುದು ಎಂದರು.

ಒಂದು ಚಿತ್ರವು ಉತ್ತಮವಾಗಿ ಮೂಡಿಬರಲು ನಿರ್ದೇಶನದ ಜೊತೆಗೆ ಛಾಯಾಗ್ರಾಹಕರು ಮತ್ತು ಸಂಕಲನಕಾರರ ಪರಿಶ್ರಮ ಎಚ್ಚೆರುತ್ತದೆ ಇವರಿಬ್ಬರ ಚತುರ್ಥಿ ಸಿನಿಮಾವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.

ಕನ್ನಡ ಚಿತ್ರರಂಗದಲ್ಲಿ ಮೂಡಿ ಬರುತ್ತಿರುವ ಹಲವಾರು ಚಿತ್ರಗಳಿಗೆ ಪ್ರೇಕ್ಷಕರು ಪ್ರೋತ್ಸಾಹವನ್ನು ನೀಡಬೇಕು ಕನ್ನಡ ಚಿತ್ರರಂಗವನ್ನು ಬೆಳೆಸಬೇಕು ಎಂದರು.
ಹಾಗೂ ಸಮಿತಿಯ ಉಪವಿಶೇಷಾಧಿಕಾರಿಯಾದ ಸವಿತಾ.ಎಂ.ಕೆ, ಸಮಿತಿಯ ಕಾರ್ಯಾದ್ಯಕ್ಷರಾದ ಪ್ರಿಯದರ್ಶಿನಿ, ಮತ್ತು ಸಮಿತಿಯ ಸಹ ಕಾರ್ಯದರ್ಶಿಯಾದ ಟಿ.ಕೆ ಹರೀಶ್ ಅವರು ಕಾರ್ಯವನ್ನು ಉದ್ದೇಶಿಸಿ ಮಾತನಾಡಿದರು.
ಮತ್ತು ಚಲನಚಿತ್ರೋತ್ಸವದ ಕಾರ್ಯಕಾರಿಣಿ ಅಧ್ಯಕ್ಷರಾದ ರಮೇಶ್ ಅವರು ಹಾಗೂ ಉಪಾಧ್ಯಕ್ಷರಾದ ಕುಮಾರ್ ಅವರು ಉಪಸ್ಥಿತರಿದ್ದರು.