ಭಾರತೀನಗರ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಯುವಕ ಬಲಿಯಾಗಿರುವ ಘಟನೆ ಬೋರಾಪುರ ಕಾಲೋನಿ ಬಳಿ ಗುರುವಾರ ರಾತ್ರಿ ಜರುಗಿದೆ.
ಘಟನೆಯಲ್ಲಿ ಚಿಕ್ಕರಸಿನಕೆರೆ ಗ್ರಾಮದ ರಾಜೇಂದ್ರ ಅವರ ಪುತ್ರ ೨೫ ವರ್ಷದ ಪುನೀತ್ ಕೊಲೆಯಾದ ದುರ್ದೈವಿ ಯುವಕ.
ಕೊಲೆಯಾದ ಯುವಕ ಪುನೀತ್ ಮತ್ತು ಆತನ ಕೆಲವು ಸ್ನೇಹಿತರು ಐಪಿಎಲ್‌ನ ಸೀಜನ್ ಆರಂಭದಿಂದಲೂ ಯಾವ ತಂಡ ಗೆಲ್ಲುತ್ತದೆ.ಯಾವುದು ಸೋಲುತ್ತದೆ ಎಂದು ವಿವಿಧ ಆಯಾಮಗಳಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.
ಘಟನೆ ವಿವರ :
ಈಗಾಗಲೇ ನಡೆದಿರುವ ಐಪಿಎಲ್ ಬೆಟ್ಟಿಂಗ್‌ನಲ್ಲಿ ಪುನೀತ್ ಹೆಚ್ಚು ಆಟಗಳಲ್ಲಿ ಗೆದ್ದಿದ್ದ.ಇದರ ಹಣವನ್ನು ಕೊಡುವಂತೆ ಶರತ್,ಮಂಜು, ಸತೀಶ್ ಮತ್ತಿತರರನ್ನು ಕೇಳಿದಾಗ ತಾವು ಇದ್ದಲ್ಲಿಗೆ ಬರುವಂತೆ ಹೇಳಿದ್ದಾರೆ.ತನ್ನ ಸ್ನೇಹಿತರ ಜೊತೆ ಗುರುವಾರ ಸಂಜೆ ಬೆಟ್ಟಿಂಗ್ ಹಣ ಪಡೆಯಲು ಬೋರಾಪುರ ಗೇಟ್ ಬಳಿಯ ಕಾಲುವೆಯ ರಸ್ತೆಗೆ ಹೋಗಿದ್ದ ವೇಳೆ ಹಣ ನೀಡೋಕೆ ಶರತ್ ಮತ್ತು ಆತನ ಸ್ನೇಹಿತರು ಕಿರಿಕ್ ತೆಗೆದು ಮಾತಿಗೆ ಮಾತು ಬೆಳೆದು ೧೦ ಮಂದಿ ಯುವಕರು ದೊಣ್ಣೆ,ಕಲ್ಲು ಮತ್ತಿತರ ವಸ್ತುಗಳಿಂದ ಪುನೀತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪುನೀತ್‌ನನ್ನು ಆತನ ಸ್ನೇಹಿತರು ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಪರಿಣಾಮ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗಿನ ಜಾವ ಪುನೀತ್ ಸಾವನ್ನಪ್ಪಿದ್ದಾನೆ.ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್,ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಡಿವೈಎಸ್‌ಪಿ ನವೀನ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ನಿವೃತ್ತ ನಿರೀಕ್ಷಕ ಎಸ್.ಎಂಸತೋಷ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ರಾತ್ರಿ ಇಡೀ ವಿವಿಧೆಡೆ ವಿಂಚಿನ ಕಾರ್ಯಾಚರಣೆ ನಡೆಸಿದ ಮದ್ದೂರು ಪೊಲೀಸರು ಕೊಲೆ ಆರೋಪಿಗಳಾದ ಶರತ್, ಮಂಜ ಅಲಿಯಾಸ್ ದೊಡ್ಡಮಂಜ, ಬಿ.ಎಲ್.ಮಂಜ, ಸುಮಂತ್ ಸೇರಿದಂತೆ ೧೦ ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಮನುಷ್ಯನಿಗೆ ಹಣ ಮುಖ್ಯನಾ?…. ಇಲ್ಲ ಗುಣ ಮುಖ್ಯಾನಾ?……
ನಾಡ ದೇವತೆ…. ಶ್ರೀ ಚಾಮುಂಡೇಶ್ವರಿ…🙏🏻
ನಮ್ಮ ರಾಜ್ಯದ ಭವಿಷ್ಯ ಚಿಂತಾ ಜನಕವಾಗಿದೆ ಪುಗಸಟ್ಟೆ ಕೊಡುವ ಅವಾಂತರ
ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಅಪ್ಪ ಬರಿಮಾತಲ್ಲ ಊಹೆಗೂ ನಿಲುಕದ ಆಕಾಶ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.