ಮನೆ ಜ್ಯೋತಿಷ್ಯ ಗೃಹ ರಾಶಿ ಮತ್ತು ನಕ್ಷತ್ರಗಳು

ಗೃಹ ರಾಶಿ ಮತ್ತು ನಕ್ಷತ್ರಗಳು

0

ಅಂಧ ನಕ್ಷತ್ರಗಳು :- ರೋಹಿಣಿ, ಪುಷ್ಯ, ಉತ್ತರ ಪಾಲ್ಗುಣಿ, ವಿಶಾಖ, ಪೂರ್ವಾಷಾಡ, ಧನಿಷ್ಠ ಮತ್ತು ರೇವತಿ.    

Join Our Whatsapp Group

ಮಂದನೇತ್ರ ನಕ್ಷತ್ರಗಳು :- ಮೃಗಶಿರ, ಆಶ್ಲೇಷ, ಹಸ್ತ, ಅನುರಾಧ, ಉತ್ತರಾಷಾಡ, ಶತಭಿಷಾ, ಅಶ್ವಿನಿ……

ಮಧ್ಯನೇತ್ರ ನಕ್ಷತ್ರಗಳು :- ಆರಿದ್ರ, ಮಾಘ, ಚಿತ್ತ, ಜೇಷ್ಠ, ಅಭಿಜಿತ್, ಪೂರ್ವ ಭಾದ್ರಪದ ಮತ್ತು ಭರಣಿ  

ಸುಲೋಚನಾ ನಕ್ಷತ್ರಗಳು :- ಪುನರ್ವಸು, ಪೂರ್ವ ಪಾಲ್ಗುಣಿ, ಸ್ವಾತಿ, ಮೂಲ, ಶ್ರವಣ, ಉತ್ತರಭಾದ್ರಪದ ಮತ್ತು ಕೃತಿಕ ನಕ್ಷತ್ರಗಳು.

ನಕ್ಷತ್ರ ಪಂಚಕ :- ಧನಿಷ್ಠ, ಶತಭಿಷ, ಪೂರ್ವ ಭಾದ್ರಪದ, ಉತ್ತರ ಭಾದ್ರಪದ ಮತ್ತು ರೇವತಿ ನಕ್ಷತ್ರಗಳು.

ಮೂಲಸಂಜ್ಞೆಯ ನಕ್ಷತ್ರಗಳು :- ಅಶ್ವಿನಿ, ಆಶ್ಲೇಷ, ಮಾಘಾ, ಜೇಷ್ಠ ಮೂಲ ಈ ನಕ್ಷತ್ರಗಳಲ್ಲಿ ಬೇರೆ ಬೇರೆ ಪಾದಗಳಿಗೆ ಹುಟ್ಟಿದ ಶಿಶುಗಳ ದೋಷ ನಿವಾರಣೆಗಾಗಿ ಶಾಂತಿಯನ್ನು ಮಾಡಿಸುವರು ಬೇರೆ ಬೇರೆ ನಕ್ಷತ್ರಗಳ ದೋಷ ಈ ರೀತಿಯಲ್ಲಿವೆ.

ಜೇಷ್ಠ ನಕ್ಷತ್ರದ ಕೊನೆಯಲ್ಲಿ ಮತ್ತು ಮೂಲ ನಕ್ಷತ್ರದ ಹಾದಿಯಲ್ಲಿ ಹುಟ್ಟಿದ ಮಗುವಿಗೆ ಅಬುಕ್ತ ಮೂಲ ಎಂಬ ದೋಷ ಬರುವುದು. ಇದರಿಂದಾಗಿ ಮಗು ಹೆಚ್ಚು ಕಾಲ ಬದುಕಿರಲಾರದು. ಮಗುವಿನ ದೋಷ ಪರಿಹಾರ ಮಾಡಿದರೆ ಮುಂದೆ ಹೆಚ್ಚು ಕಾಲ, ಸಕಲ ಸೌಭಾಗ್ಯಗಳನ್ನು ಹೊಂದಿ ಸಂತೋಷದಿಂದ ಬಾಳುವರು.

ಅಶ್ವಿನಿ ನಕ್ಷತ್ರದ ಪ್ರಥಮ ಚರಣದಲ್ಲಿ ಜನಿಸಿದ ಶಿಶುವು ತಂದೆಗೆ ತೊಂದರೆದಾಯಕವೆನಿಸುವುದು. ಉಳಿದ ಮೂರು ಪಾದಗಳಲ್ಲಿ ಜನಿಸಿದ್ದರೆ ಏನು ತೊಂದರೆ ಇಲ್ಲ.

ಆಶ್ಲೇಷ ನಕ್ಷತ್ರದ ಪ್ರಥಮ ಪಾದದಲ್ಲಿ ಜನಿಸಿದರೆ, ಶುಭವಾಗುವುದು ಆದರೆ ದ್ವಿತೀಯ ಚರಣವು ಧನನಾಶಕವೆನಿಸಿದೆ, ತೃತೀಯ ಚರಣವು ಮಾತೆ ಅಥವಾ ಅತ್ತೆಗೆ ಭಯಕಾರಕವೆನಿಸಿದೆ, ನಾಲ್ಕನೇ ಚರಣದಲ್ಲಿ ಜನಿಸಿದ ಮಗುವಿನಿಂದ ತಂದೆಗೆ ಅನಿಷ್ಠ ವಾಗುವುದು.

ಮೂಲಾ ನಕ್ಷತ್ರದ ಪ್ರಥಮ ಚರಣದಲ್ಲಿ ಮಗು ಜನಿಸಿದರೆ, ತಾಯಿಗೆ ತೊಂದರೆ, ದ್ವಿತೀಯ ಚರಣದಲ್ಲಿ ಜನಿಸಿದರೆ ತಂದೆಗೆ ಅರಿಷ್ಟವೂ, ಮೂರು ಮತ್ತು ನಾಲ್ಕನೇ ಚರಣದಲ್ಲಿ ಜನಿಸುವವರು ಶುಭದಾಯಕವಾಗಿರುವುದು.

ಜೇಷ್ಠ ನಕ್ಷತ್ರದಲ್ಲಿ ಪ್ರಥಮ ಪಾದದಲ್ಲಿ ಜನಿಸಿದರೆ ಅಣ್ಣನಿಗೆ ತೊಂದರೆ, ಎರಡನೇ ಪಾದರದಲ್ಲಿ ಜನಿಸಿದರೆ ತಂದೆಗೆ ತೊಂದರೆ ಆಗುವುದು, ಮೂರನೇ ಚರಣಗಳಲ್ಲಿ ಮಗು ಜನಿಸಿದರೆ ತಾಯಿಗೆ ತೊಂದರೆಯು, ನಾಲ್ಕನೇ ಚರಣದಲ್ಲಿ ಜನಿಸಿದರೆ ಜನಿಸಿದ ಮಗುವಿಗೆ ತೊಂದರೆಯಾಗುವುದು.

ಮೂಲ ನಕ್ಷತ್ರದ ಪ್ರಥಮ ಚಂದದಲ್ಲಿ ಮಗು ಹುಟ್ಟಿದರೆ ತಂದೆ ಅಥವಾ ಮಾವನಿಗೆ ತೊಂದರೆ, ಎರಡನೇ ಚರಣದಲ್ಲಿ ಹುಟ್ಟಿದರೆ ತಾಯಿಗೆ ತೊಂದರೆ ಇದೆ. ಮೂರನೇ ಚರಣದಲ್ಲಿ ಮಗು ಜನಿಸಿದರೆ ಆರ್ಥಿಕ ತೊಂದರೆ ಉಂಟಾಗುವುದು, ನಾಲ್ಕನೇ ಚರಣದಲ್ಲಿ ಮಗು ಜನಿಸಿದರೆ ಅತ್ಯಂತ ಶುಭದಾಯಕವಾಗುವುದು..

ರೇವತಿ ನಕ್ಷತ್ರದ ಪ್ರಥಮ ಕ್ಷಣದಲ್ಲಿ ಮಗು ಜನಿಸಿದರೆ ಶುಭವಾಗುವುದು, ಎರಡು ಮತ್ತು ಮೂರನೇ ಚರಣದಲ್ಲಿ ಜನಿಸಿದರು ತೊಂದರೆ ಇಲ್ಲ, ನಾಲ್ಕನೇ ಚರಣದಲ್ಲಿ ಮಗು ಜನಿಸಿದರೆ ಕಷ್ಟಕರವೆನಿಸುವುದು.

ಆರಿದ್ರ, ಪುನರ್ವಸು, ಪುಷ್ಪ, ಆಶ್ಲೇಷ, ಮಾಘ, ಪೂರ್ವ ಪಾಲ್ಗುಣಿ, ಉತ್ತರ ಪಾಲ್ಗುಣಿ, ಹಸ್ತ, ಚಿತ್ತಾ, ಸ್ವಾತಿ, ವಿಶಾಖ, ಅನುರಾಧ ನಕ್ಷತ್ರಗಳನ್ನ ಬೆಳ್ಳಿಗೆ ಹೋಲಿಸಿದ್ದು ಈ ನಕ್ಷತ್ರ ಶ್ರೇಷ್ಠತೆ ನೀಡಿದ್ದಾರೆ. ಜೇಷ್ಟ, ಮೂಲಾ, ಪೂರ್ವಾಷಾಡಾ, ಶ್ರವಣ, ಧನಿಷ್ಠ, ಶತಭಿಷಾ, ಪೂರ್ವಭಾದ್ರಪದ, ಉತ್ತರ ಭಾದ್ರಪದ, ನಕ್ಷತ್ರಗಳನ್ನು ತಾಮ್ರಕ್ಕೆ ಹೋಲಿಸಿದ್ದಾರೆ. ಅವು ಸಹ ಉತ್ತಮ ಫಲದಾಯಕಗಳು. ರೇವತಿ, ಅಶ್ವಿನಿ, ಭರಣಿ ನಕ್ಷತ್ರಗಳು ಬಂಗಾರಕ್ಕೆ ಹೋಲಿಸಿದ್ದಾರೆ, ಇನ್ನುಳಿದ ನಕ್ಷತ್ರವನ್ನು ಕಬ್ಬಿಣದಂತ ಲೋಹ ಎಂದು ವರ್ಣಿಸಿದ್ದಾರೆ.