ಮನೆ ಸುದ್ದಿ ಜಾಲ ಮಾ.12ಕ್ಕೆ ನಿಗದಿಯಾಗಿದ್ದ ನೀಟ್‌ ಪಿಜಿ ಪರೀಕ್ಷೆ ಮುಂದೂಡಿಕೆ

ಮಾ.12ಕ್ಕೆ ನಿಗದಿಯಾಗಿದ್ದ ನೀಟ್‌ ಪಿಜಿ ಪರೀಕ್ಷೆ ಮುಂದೂಡಿಕೆ

0

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು 2022ರ ನೀಟ್ ಪರೀಕ್ಷೆ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಸ್ನಾತಕೋತ್ತರ ಪದವಿ)ಯ ದಿನಾಂಕವನ್ನು ಮುಂದೂಡಿದೆ.

NEET PG 2022 ಪರೀಕ್ಷೆಯ ದಿನಾಂಕವನ್ನು 6-8 ವಾರಗಳವರೆಗೆ ಮುಂದೂಡಲಾಗಿದೆ.

ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಎಂಬಿಬಿಎಸ್ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಡ್ಡಾಯ ಇಂಟರ್ನ್‌ಶಿಪ್‌ ಪೂರೈಸದ ಕಾರಣ ಪರೀಕ್ಷೆ ಮಂದೂಡುವಂತೆ ಆರು ಎಂಬಿಬಿಎಸ್ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಕೋವಿಡ್ ಕರ್ತವ್ಯದಿಂದಾಗಿ ಇಂಟರ್ನ್‌ಶಿಪ್‌ ಸ್ಥಗಿತಗೊಂಡಿವೆ ಎಂದು ಅವರು ಹೇಳಿದರು.

ಇದರ ಬೆನ್ನಲೇ ಸರ್ಕಾರ ಪರೀಕ್ಷೆಯನ್ನು ಮುಂದೂಡಿದೆ. ಇಂದು ನ್ಯಾಯಮೂರ್ತಿಗಳಾದ ಡಿ. ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ.

ಹಿಂದಿನ ಲೇಖನಪಂಜಾಬ್ ಸಿಎಂ ಅಳಿಯನ ಬಂಧನ  ರಾಜಕೀಯ ಪ್ರೇರಿತ: ಕಾಂಗ್ರೆಸ್ ಆರೋಪ
ಮುಂದಿನ ಲೇಖನವಿಚಾರಣೆಗೆ ಹಾಜರಾಗುವಂತೆ ಮೈಸೂರು ಮಹಾನಗರ ಪಾಲಿಕೆ ಕಮಿಷನರ್ ಗೆ ಹೈಕೋರ್ಟ್ ಆದೇಶ