ಕ್ಷೇತ್ರ ಸ್ಥಳ :- ʼ0ʼ ಡಿಗ್ರಿ ಇಂದ 13 ಡಿಗ್ರಿ 20 ಕಲೆಯವರೆಗೆ, ರಾಶಿ – ಮೇಷ, ಸ್ವಾಮಿ-ಮಂಗಳ, ನಕ್ಷತ್ರಸ್ವಾಮಿ – ಕೇತು, ಯೋನಿ – ಅಶ್ವ, ನಾಡಿ – ಆಧ್ಯಾ, ಗಣ – ದೇವ, ನಾಮಾಕ್ಷರಗಳು – ಚೂ,ಚೆ,ಚೋ,ಲಾ, ಶರೀರ ಭಾಗ – ಮೆದುಳಿನ ಅರ್ಧಭಾಗ ತಲೆ.
ರೋಗಗಳು :- ತಲೆಗೆ ಗಾಯ, ಮೆದುಳಿನಲ್ಲಿ ಊಹಾಪೋಹ, ತಲೆಯಲ್ಲಿ ರಕ್ತಕ್ಷೀಣತೆ, ಅಪಸ್ಮಾರ, ಉಗ್ರತೆ, ಶೀತಪಿತ್ತ, ಶರೀರದಲ್ಲಿ ನೋವು, ಆಲಸ್ಯ, ಮರುಗುಳಿತನ, ಅಂಗ ಘಾತ, ಮಲೇರಿಯಾ, ನಿದ್ರಾಹೀನತೆ, ಕಾಲರಾ, ಹೊಟ್ಟೆ ಬೆಳೆಯುವುದು.
ಸಂರಚನೆ :- ವಿಚಾರಶೂನ್ಯವಾದ ಅತ್ಯಾಸೆ ಹೊಂದಿರುವ ಜಮೀನು ಮನೆ ಮುಂತಾದ ಆಸ್ತಿ ಹೊಂದಿರುವ ಚಿಂತಾಗ್ರಸ್ತ, ಅಣ್ಣತಮ್ಮಂದಿರಿಗೆ ರೋಗವಿರುವ, ಜಾದು ಮುಂತಾದ ಚಮತ್ಕಾರ ತಿಳಿದ, ಈಶ್ವರ ಭಕ್ತನಾದ, ಸಮರ್ಥವಾದಿಯಾದ, ಪರಂಪರೆ ವಿರೋಧಿಸುವ, ಅಲಂಕಾರ ಪ್ರಿಯ, ನರ ಸುಂದರನಾದ, ಎಲ್ಲರಿಗೂ ಹೊಗಳಲ್ಪಡುವ, ಬುದ್ದಿವಂತ, ಉತ್ತಮ ಶರೀರ ಹೊಂದಿರುವವನು ಆಗಬಹುದಾಗಿದೆ.
ಉದ್ಯೋಗ, ವಿಶೇಷ ಗುಣಗಳು :- ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದವನು ಕಾರ್ಮಿಕನಾಗಿ, ಕಾರ್ಯಾಗಾರದಲ್ಲಿ ಕೆಲಸ ಮಾಡುವವನು, ಪೋಲೀಸ್, ರೈಲ್ವೆ, ಆಸ್ಪತ್ರೆ, ಶಸ್ತ್ರ ಚಿಕಿತ್ಸಗಾರ, ಬಂದೀಖಾನೆ, ನ್ಯಾಯಾಲಯ, ಯಂತ್ರ ಉತ್ಪಾದನಾ ಘಟಕ, ಪುಸ್ತಕ ವಲಯ, ಕುದುರೆ ವ್ಯಾಪಾರ, ಭೂಶೋಧನೆ, ನಾಯಕ, ಸಮ್ಮಾನಿತ ಅಧ್ಯಕ್ಷನಾಗಬಹುದು.
ಅಶ್ವಿನಿ ನಕ್ಷತ್ರದಲ್ಲಿ ಹುಟ್ಟಿದ ವ್ಯಕ್ತಿಗೆ ಬಹಳ ಕಾಲದವರೆಗೆ ಸಂತಾನ ಇರುವುದಿಲ್ಲ. ಸ್ತ್ರೀಯರಿಗೆ ಗರ್ಭಪಾತದ ಸಂದರ್ಭ ಇರಬಹುದು. ಕಾಮಾಸಕ್ತಿ ಕಡಿಮೆ ಇರುವವರು. ಜನರು ವಿಚಾರಿಸಿದರು. ಅಧ್ಯಯನಶೀಲರು, ಅಧ್ಯಾಪನ ಕಾರ್ಯ ಮಾಡುವವರು, ಜ್ಯೋತಿಷಿ ವೈದ್ಯ ಸಹ ಆಗಬಹುದಾಗಿದೆ. ಶಾಸ್ತ್ರಜ್ಞಾನ, ಲೇಖಕ, ಪ್ರವಾಸಿ, ಆಗಬಹುದು. ಚಂಚಲ ಸ್ವಭಾವದ ಪ್ರಾಮಾಣಿಕನಾದ ಚರ್ಮ ವಿಕಾರವಿರುವ ಮನೆಯಲ್ಲೇ ಜಗಳಕ್ಕೆ ಕಾರಣನಾಗಲುಬಹುದು.
ಅಶ್ವಿನಿ ನಕ್ಷತ್ರದವರಿಗೆ ಕೇತು ದೆಶೆ ಆರಂಭವಾಗುವುದು. ಸೂರ್ಯನು ನಕ್ಷತ್ರದಲ್ಲಿ ಪ್ರತಿ ವರ್ಷ ವೈಶಾಖ ಮಾಸದ ಆರಂಭದಲ್ಲಿ ಇರುತ್ತಾನೆ. ಚಂದ್ರನು ಪ್ರತಿ 27 ದಿನಗಳಿಗೆ ಒಮ್ಮೆ ಒಂದು ದಿನ ಇರುತಾನೆ. ಕೇತು ದಶೆಯ ಮಂಗಳಮುಕ್ತಿ ಇರುವಾಗ ಮೇಲೆ ಹೇಳಿದ ಎಲ್ಲಾ ಫಲಗಳು ಉಂಟಾಗಬಹುದಾಗಿದೆ. ಕೇತುದಶೆಯು ಅತಿ ಹೆಚ್ಚು ಎಂದರೆ 7 ವರ್ಷಗಳವರೆಗೆ ಇರುವುದು.