ಮನೆ ರಾಜ್ಯ ಮೇ 10 ರಂದು ಡಾ.ಶ್ರೀ ಶ್ರೀ ಶಾಂತವೀರ ಮಹಾಸ್ವಾಮೀಜಿ ಅವರಿಗೆ ನುಡಿನಮನ

ಮೇ 10 ರಂದು ಡಾ.ಶ್ರೀ ಶ್ರೀ ಶಾಂತವೀರ ಮಹಾಸ್ವಾಮೀಜಿ ಅವರಿಗೆ ನುಡಿನಮನ

0

ಬೆಂಗಳೂರು (Bengaluru)- ಬೆಂಗಳೂರಿನ ಶ್ರೀ ಕೊಳದಮಠ ಮಹಾ ಸಂಸ್ಥಾನದಲ್ಲಿ ಮೇ 10 ರಂದು ಬೆಳಿಗ್ಗೆ 10.30ಕ್ಕೆ ಪರಮಪೂಜ್ಯ ಚರಮೂರ್ತಿ ಡಾ.ಶ್ರೀ ಶ್ರೀ ಶಾಂತವೀರ ಮಹಾಸ್ವಾಮೀಗಳವರ ಶಿವಗಣರಾಧನೆ ಭಕ್ತಿ ಸಮರ್ಪಣೆ-ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಚಿತ್ರದುರ್ಗ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠ ಶೂನ್ಯ ಪೀಠಾಧ್ಯಕ್ಷರಾದ, ತ್ರಿವಿಧ ದಾಸೋಹಿ ಪರಮಪೂಜ್ಯ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿ ಅವರ ದಿವ ಸಾನಿಧ್ಯದಲ್ಲಿ ಶ್ರೀ ಕೊಳದಮಠ ಮಹಾ ಸಂಸ್ಥಾನದ ಆವರಣದಲ್ಲಿರುವ ಆತ್ಮಶ್ರೀ ಮಂಟಪದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರು ಶ್ರೀ ಬೇಲಿಮಠ ಮಹಾಸಂಸ್ಥಾನದ ಶಿವಾನುಭವ ಚರಮೂರ್ತಿ ಪರಮಪೂಜ್ಯ ಶ್ರೀ ಶಿವರುದ್ರ ಮಹಾಸ್ವಾಮೀಜಿ ಅವರು ಸಮ್ಮುಖ ವಹಿಸಲಿದ್ದು, ಕನಕಪುರ ಶ್ರೀ ಮರಳೇಗವಿ ಮಠದ ಪರಮಪೂಜ್ಯ ಚರಮೂರ್ತಿ ಡಾ.ಶ್ರೀ ಮುಮ್ಮಡಿ ಶಿವರುದ್ರ ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

ಎಡೆಯೂರು ಬಾಳೇಹೊನ್ನೂರು ಮಠದ ಪೂಜ್ಯಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಶ್ರೀ ಆದಿಚುಂಚನಗಿರಿ ಶಾಖಾಮಠದ ಪೂಜ್ಯಶ್ರೀ ಸೌಮ್ಯನಾಥ ಸ್ವಾಮೀಜಿಗಳು, ಬೆಂಗಳೂರು ಶ್ರೀ ಗಜಾಂ ಮಠದ ಪೂಜ್ಯಶ್ರೀ ಚಿದ್ಧನ ಸ್ವಾಮೀಜಿಗಳು, ಶ್ರೀರಂಗಪಟ್ಟಣ ಚಂದ್ರವನ ಮಠದ ಪೂಜ್ಯಶ್ರೀ ತ್ರಿನೇತ್ರ ಮಹಾಂತ ಸ್ವಾಮೀಜಿಗಳು, ಮಾಗಡಿ ಕಂಚುಗಲ್‌ ಬಂಡೇಮಠದ ಪೂಜ್ಯಶ್ರೀ ಬಸವಲಿಂಗ ಸ್ವಾಮೀಜಿಗಳು, ಬೆಂಗಳೂರು ಶ್ರೀ ಸರ್ಪಭೂಷಣ ಶಿವಯೋಗಿ ಮಠದ ಪೂಜ್ಯಶ್ರೀ ಮಲ್ಲಿಕಾರ್ಜುನ ದೇವರು, ಬೆಂಗಳೂರಿನ ಓಂಕಾರ ಆಶ್ರಮದ ಪೂಜ್ಯಶ್ರೀ ಮಧುಸುಧಾನಂದ ಸ್ವಾಮೀಜಿಗಳು ನುಡಿನಮನ ಸಲ್ಲಿಸಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿರಲಿದ್ದಾರೆ.

ಹಿಂದಿನ ಲೇಖನಪುಣ್ಯಕೋಟಿ ದತ್ತು ಯೋಜನೆ ಆರಂಭ: ಹುಟ್ಟುಹಬ್ಬಕ್ಕೆ 11 ಗೋವು ದತ್ತು ಪಡೆದ ಸಿಎಂ ಬೊಮ್ಮಾಯಿ
ಮುಂದಿನ ಲೇಖನಸಿಎಂ ಸ್ಥಾನಕ್ಕೆ 2,500 ಕೋಟಿ ರೂ. ಲಂಚ ಆರೋಪ: ಶಾಸಕ ಯತ್ನಾಳ್‌ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ