ಮನೆ ಕ್ರೀಡೆ ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ

ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ

0

ಮುಂಬೈ (ಮಹಾರಾಷ್ಟ್ರ): ದಕ್ಷಿಣ ಆಫ್ರಿಕಾ ನೀಡಿದ ಬೃಹತ್ ಮೊತ್ತಕ್ಕೆ ಬಾಂಗ್ಲಾ ಟೈಗರ್ಸ್ ಬೆಚ್ಚಿ ಬಿದ್ದರು. 46.4 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡ ಬಾಂಗ್ಲಾದೇಶ ತಂಡ 149 ರನ್ ಗಳಿಂದ ಸೋಲನುಭವಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 382 ರನ್ ಕಲೆ ಹಾಕಿತ್ತು.

383 ರನ್ ಗುರಿ ಬೆನ್ನತ್ತಿದ ಬಾಂಗ್ಲಾದೇಶ  ಆರಂಭಿಕರಾದ ತಂಝೀದ್ ಹಸನ್ ಮತ್ತು ಲಿಟ್ಟನ್ ದಾಸ್ 30 ರನ್ ಗಳ ಜತೆಯಾಟ ಮಾಡಿದರು. 12 ರನ್ ಗೆ ತಂಝೀದ್ ಹಸನ್ ವಿಕೆಟ್ ಕೊಟ್ಟರು.

ಅವರ ನಂತರ ಸತತ ವಿಕೆಟ್ ಗಳನ್ನು ಹರಿಣ ಪಡೆಯ ಬೌಲರ್ ಗಳು ಕಬಳಿಸಿದರು. ಹಸನ್ ಬಳಿಕ ನಜ್ಮುಲ್ ಹೊಸೈನ್ ಶಾಂಟೊ (0), ಶಕೀಬ್ ಅಲ್ ಹಸನ್(1), ಮುಶ್ಫಿಕರ್ ರಹೀಮ್ (8) ಮತ್ತು ಇನ್ನೋರ್ವ ಆರಂಭಿಕ ಲಿಟ್ಟನ್ ದಾಸ್ (22) ಸಹ ವಿಕೆಟ್ ಕೊಟ್ಟರು. 14.6 ಓವರ್ ಗೆ ಬಾಂಗ್ಲಾ 58 ರನ್ ಗೆ 5 ವಿಕೆಟ್ ಗಳನ್ನು ಕಳೆದುಕೊಂಡಿತು.

ಮಹಮ್ಮದುಲ್ಲಾ ಏಕಾಂಗಿಯಾಗಿ ತಂಡಕ್ಕೆ ಆಸರೆಯಾದರು, ಕೆಳ ಕ್ರಮಾಂಕದ ಆಟಗಾರರಾದ ಮೆಹಿದಿ ಹಸನ್ ಮಿರಾಜ್ (11), ನಸುಮ್ ಅಹ್ಮದ್ (19) ಮತ್ತು ಹಸನ್ ಮಹಮ್ಮದ್ (15) ವಿಕೆಟ್ ನಿಲ್ಲಿಸಿ ಮಹಮ್ಮದುಲ್ಲಾಗೆ ನೆರವಾದರು.

ಮಹಮ್ಮದುಲ್ಲಾ ತಮ್ಮ ಶತಕ ಪೂರೈಸಿಕೊಂಡರು. ಇನ್ನಿಂಗ್ಸ್ನಲ್ಲಿ 111 ಬಾಲ್ ಎದುರಿಸಿ 11 ಬೌಂಡರಿ, 4 ಸಿಕ್ಸ್ನಿಂದ 111 ಕಲೆಹಾಕಿ ಔಟ್ ಆದರು. ಇವರ ಶತಕದ ಇನ್ನಿಂಗ್ಸ್ ನ ನೆರವಿನಿಂದ ಬಾಂಗ್ಲಾ 200ರ ಗಡಿ ದಾಟಿತು. ಮುಸ್ತಫಿಜುರ್ ರೆಹಮಾನ್ (11) ವಿಕೆಟ್ ಪತನದಿಂದ ಬಾಂಗ್ಲಾದೇಶ 46.4 ಓವರ್ ಗೆ 233 ರನ್ ಗೆ ಸರ್ವಪತನ ಕಂಡಿತು.