ಮನೆ ದೇವಸ್ಥಾನ ಮಾಣಿಕನಗರ

ಮಾಣಿಕನಗರ

0

ಬೀದರ್ ಜಿಲ್ಲೆಯ ಹುಮಾನಾಬಾದ್ ಗೆ 2 ಕಿ.ಮೀ. ದೂರದ ಒಂದು ಹಳ್ಳಿ. ಇಲ್ಲಿ ಹಿಂದೆ ಮಾಣಿಕಪ್ರಭು ಎಂಬ ಶಿವಯೋಗಿಗಳು ಬಂದು ನೆಲೆಸಿ ಕಾಡನ್ನು ಊರಾಗಿಸಿದರೆಂದು ಐತಿಹ್ಯವಿದೆ.

ಇಲ್ಲಿ ಒಂದು ಕಂದರದಲ್ಲಿ ವಿರಜಾ ಮತ್ತು ಗುರುಗಂಗಾ ಎಂಬ ಎರಡು ಚಿಕ್ಕ ಹೊಳೆಗಳು ಸಂಗಮಿಸುತ್ತವೆ. ಇದು ಊರಿನ ಸೌಂದರ್ಯಕ್ಕೆ ಮೆರಗು ನೀಡಿದೆ. ಕಂದರಕ್ಕೆ ಮಣಿಚೂಕು ಕಂದರ ಎಂಬ ಹೆಸರಿದ್ದುದ್ದಾಗಿ ತಿಳಿದು ಬರುತ್ತದೆ.

ಮಾಣಿಕಪ್ರಭುಗಳು ಬಸವಕಲ್ಯಾಣದ ಲಾಡವಂತಿ ಹಳ್ಳಿಯಲ್ಲಿ ಜನಿಸಿದವರು. ಷರೀಫ್ ಮನೆತನದ ಇವರು ಬಾಲ್ಯದಲ್ಲಿ ಅನೇಕ ಪವಾಡಗಳನ್ನು ಮಾಡಿ ತೋರಿಸಿದರು. ಇವರು 4ನೆಯ ದತ್ತವತಾರ ಎಂದು ನಂಬಿಕೆ ಇದೆ. ಇವರು ಸರ್ವಧರ್ಮ ಸಮ್ಮತ ಸಂಪ್ರದಾಯ ಸ್ಥಾಪಿಸಿ ಎಲ್ಲ ಮತಗಳ ದೇವರ ನಾಮಗಳನ್ನು ರಚಿಸಿ ಹಾಡಿದವರು. ಇವರ ಸಮಾಧಿ ಊರಿನಲ್ಲಿದ್ದು, ಒಂದು ದೇವಾಲಯವನ್ನು ಕಟ್ಟಲಾಗಿದೆ. ಪುಣ್ಯಕ್ಷೇತ್ರ ಎನಿಸಿರುವ ಇಲ್ಲಿ ಪ್ರತಿ ವರ್ಷ ದತ್ತ ಜಯಂತಿ ನಡೆಯುತ್ತದೆ. ಇಲ್ಲಿನ ಹವೆ ಹಿತಕರ. ಮಣಿಕಪ್ರಭುಗಳು ಹುಮನಾಬಾದ್ ನ ವೀರಭದ್ರ ದೇವಸ್ಥಾನದ ವೀರಭದ್ರ ದೇವರನ್ನ ಕುರಿತು ಅನೇಕ ಕೀರ್ತನೆಗಳನ್ನು ರಚಿಸಿದರು. ಹುಮಾನಬಾದ್ ನಲ್ಲಿ ಪ್ರತಿವರ್ಷ ವೀರಭದ್ರ ದೇವರ ಜಾತ್ರೆ ನಡೆಯುತ್ತದೆ.

ಅಳಂದ

ಒಂದು ತಾಲೂಕು ಕೇಂದ್ರ. ಜಿಲ್ಲೆ ಗುಲ್ಬರ್ಗ. ಕಲಬುರ್ಗಿ ವಾಯುವ್ಯದಲ್ಲಿ 48 ಕಿ.ಮೀ. ದೂರದಲ್ಲಿದೆ. ಇಲ್ಲಿನ ರಾಘವ ಚೈತನ್ಯ ಪರಾತ್ಪರ ಗುರುಗಳ ಸಮಾಧಿ, ಲಾಡ್ಲೆ ಮುಷೈಕರ ದರ್ಗಾಗಳಿದ್ದು ಪ್ರಸಿದ್ಧವಾಗಿದೆ. ಈ ಊರು ಪವಿತ್ರ ಯಾತ್ರಾಸ್ಥಳ.