ಎಕೋ ನಾರಾಯಣ ನಿನಗೇಕಿಲ್ಲ ಕರುಣಾ
ಭುವಿಯಲ್ಲಿ ಬಂದಿದೆ ದುರಿಣಾ
ಏಕೋ ನಾರಾಯಣ || ಪ
ಕನಿಕರ ತೋರದೆ ನೀ ಕುಳಿತೆ
ಧರೆಯೋಳು ಜನರು ನೀ ಮರೆತೆ
ಕಾಲನ ಕೈಯಲ್ಲಿ ಜೀವವು ನೆಲಗುತಿವೆ
ನೀನೆ ಗತಿ ಬಾ ಎಂದು ನಾ ಕರ ಮುಗಿಯುವೆ || 1
ದಾರುಣವಾದ ಕಷ್ಟ ಬಂದೆರಗಿದೆಯೋ
ಭೂವಿಯೋಳು ಹುಳ ಒಂದು ಕಾಡುತ್ತಿದೆಯೋ
ನಿನಗರಿವಿಲ್ಲವೇ ಹೇ ನಾರಾಯಣ
ಮಕ್ಕಳ ತಪ್ಪನ್ನು ಕ್ಷಮಿಸೋ ಲಕ್ಷ್ಮೀರಮಣಾ || 2
ಬಡವ ಶ್ರೀಮಂತರೆನ್ನದೆ ಬೆನ್ನ ಹತ್ತಿದೆ
ದುಃಖದಲ್ಲಿ ಸಜ್ಜನ ಬಸವಳಿಯುತಿದೆ
ದಾರಿ ಕಾಣದೆ ಕಂಗಾಲಾಗಿದೆ
ಜಾಹ್ನವಿ ವಿಠ್ಠಲ ದಯ ತೋರಬಾರದೆ || 3