ಮನೆ ದೇವರ ನಾಮ ಶ್ರೀ ಸಿದ್ದೇಶ್ವರ

ಶ್ರೀ ಸಿದ್ದೇಶ್ವರ

0


ಬಹಳ ದೂರದಿಂದ ಬಳಲಿ ನಾ ಬಂದೆ ನಿನ್ನ ಬಳಿಗೆ,
ದಯತೋರಿ ನಿ ಸಲಹೋ ಶ್ರೀ ಸಿದ್ದೇಶ್ವರ. (ಪ)
ಯೋಗಿಯಾಗಿ ಸಲಹುತ ಜನರನ್ನು
ವಿಜಯಪುರದಲ್ಲಿ ನಿನಿರುವೆ
ಬಹಳ ದೂರದಿಂದ
ವರ್ಷಕ್ಕೊಮ್ಮೆ ಬರುವ ನಿನ್ನ ಜಾತ್ರಯು
ನೋಡುವದೇ ಚಂದವೋ
ಬಹಳ ದೂರದಿಂದ
ಸಡಗರದಿ ಜನರು ನಿನ್ನ ಗುಡಿಗೆ ಬರುವವರು,
ವರಗಳ ಬೇಡುತ್ತ ನಿನ್ನ ಸ್ಮರಣೆಯ ಮಾಡುವವರು.
ಬಹಳ ದೂರದಿಂದ
ಬೇಡಿ ಬಂದ ಭಕ್ತರ ಅಭಿಷ್ಟವ ನೀಡುವ ದೇವನೇ
ಶ್ರೀ ಸಿದ್ದೇಶ್ವರ ಜಹ್ನವಿ ವಿಠಲನ ಸೇವೆಯ ಮಾಡಿಸೋ
ಬಹಳ ದೂರದಿಂದ