ಮನೆ ಅಪರಾಧ ಜಂಬೂ ಸವಾರಿ ವೇಳೆ 45 ಗ್ರಾಂ ಚಿನ್ನದ ಸರ ಅಪಹರಣ

ಜಂಬೂ ಸವಾರಿ ವೇಳೆ 45 ಗ್ರಾಂ ಚಿನ್ನದ ಸರ ಅಪಹರಣ

0

ಮೈಸೂರು: ದಸರಾ ಜಂಬೂಸವಾರಿ ವೀಕ್ಷಿಸಲು ಆಗಮಿಸಿದ ಮಹಿಳೆಯೊಬ್ಬರು ನೂಕು ನುಗ್ಗಲಿನಲ್ಲಿ 45 ಗ್ರಾಂ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ.

ಬೃಂದಾವನ ನಗರದ ನಿವಾಸಿ ಎಲ್ಲಮ್ಮ ಎಂಬವರೇ ಜಂಬೂ ಸವಾರಿ ವೀಕ್ಷಿಸಲು ಬಂದು ಅರಮನೆ ಆವರಣದಲ್ಲಿ ಚಿನ್ನದ ಸರ ಕಳೆದುಕೊಂಡವರು.

ಎಲ್ಲಮ್ಮ ಅವರು ತಮ್ಮ ಪುತ್ರ ಹಾಗೂ ಸೊಸೆಯೊಂದಿಗೆ ಅಕ್ಟೋಬರ್ 24ರಂದು ಜಂಬೂಸವಾರಿ ವೀಕ್ಷಿಸಲು ಅರಮನೆ ಬಳಿಗೆ ಬಂದಿದ್ದರು. ಈ ವೇಳೆ ನೂಕು ನುಗ್ಗಲು ಹೆಚ್ಚಿದ್ದರಿಂದ ಎಲ್ಲಮ್ಮ ತಮ್ಮ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬಿಚ್ಚಿ ಸೊಸೆ ಶ್ವೇತಾ ಅವರ ವ್ಯಾನಿಟಿ ಬ್ಯಾಗ್ ನಲ್ಲಿ ಇರಿಸಿದ್ದರು.

ಜಯಮಾರ್ತಾಂಡ ಗೇಟ್ ಮೂಲಕ ಅರಮನೆ ಆವರಣಕ್ಕೆ ತೆರಳುತ್ತಿದ್ದ ವೇಳೆ ನೂಕು ನುಗ್ಗಲಿನಲ್ಲಿ ಅವರ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನದ ಸರವನ್ನು ದುಷ್ಕರ್ಮಿ ಎಗುರಿಸಿದ್ದಾನೆ. ಈ ಸಂಬಂಧ ಅವರು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.