ಮನೆ ಅಪರಾಧ ಮನೆ ಬಾಗಿಲಿನ ಬೀಗ ಮುರಿದು 24 ಗ್ರಾಂ ಚಿನ್ನಾಭರಣ ಕಳವು

ಮನೆ ಬಾಗಿಲಿನ ಬೀಗ ಮುರಿದು 24 ಗ್ರಾಂ ಚಿನ್ನಾಭರಣ ಕಳವು

0
ಸಾಂದರ್ಭಿಕ ಚಿತ್ರ

ಮೈಸೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಒಳನುಗ್ಗಿರುವ ಖದೀಮರು ಅಲ್ಲಿದ್ದ 30 ಸಾವಿರ ರೂ ಮೌಲ್ಯದ 24 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ.

ನಗರದ ಆಲನಹಳ್ಳಿ ನಿವಾಸಿ ಶಿವಣ್ಣ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಅಕ್ಟೋಬರ್ 23ರಂದು ಅವರು ಆಯುಧ ಪೂಜೆ ಮುಗಿಸಿ, ಕುಟುಂಬದವರೊಡನೆ ತಮ್ಮ ಸ್ವಗ್ರಾಮ ಹೊನಗನಹಳ್ಳಿಗೆ ತೆರಳಿದ್ದರು.

ಈ ವೇಳೆ ಮನೆಯ ಬೀಗ ಒಡೆದು ಒಳ ನುಗ್ಗಿರುವ ಖದೀಮರು, ಅಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಊರಿನಿಂದ ವಾಪಸ್ಸಾದನಂತರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.