ಮೈಸೂರು: ಮೈಸೂರಿನ ಮಿಲಾದ್ ಪಾರ್ಕ್ ಬಳಿ ಪ್ಯಾಲೆಸ್ಟೈನ್ ಪರವಾಗಿ ರ‍್ಯಾಲಿ ನಡೆಸಲು ನಿರ್ಧರಿಸಿದ್ದ ಎಸ್ ಡಿಪಿಐ ಸಂಘಟನೆಗೆ ನಗರ ಪೊಲೀಸ್ ಆಯುಕ್ತ ಡಾ. ರಮೇಶ್ ಅನುಮತಿ ನೀಡಿಲ್ಲ.
ಬದಲಿಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಒಂದು ವೇಳೆ ರ‍್ಯಾಲಿ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಏನದಾರೂ ಮಾಹಿತಿ ಹಂಚಿಕೊಂಡರೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.














