ಮನೆ ರಾಜ್ಯ ಗೃಹಜ್ಯೋತಿ ಯೋಜನೆ: 200 ಯೂನಿಟ್​ ಗಿಂತ ಹೆಚ್ಚು ಬಳಸಿದ್ರೆ ಅರ್ಜಿ ರಿಜೆಕ್ಟ್- ಇಂಧನ ಸಚಿವ ಕೆ.ಜೆ...

ಗೃಹಜ್ಯೋತಿ ಯೋಜನೆ: 200 ಯೂನಿಟ್​ ಗಿಂತ ಹೆಚ್ಚು ಬಳಸಿದ್ರೆ ಅರ್ಜಿ ರಿಜೆಕ್ಟ್- ಇಂಧನ ಸಚಿವ ಕೆ.ಜೆ ಜಾರ್ಜ್

0

ಬೆಂಗಳೂರು: ಗೃಹಜ್ಯೋತಿ ಯೋಜನೆಗೆ 1.43 ಕೋಟಿ ಗ್ರಾಹಕರು ಅರ್ಜಿ ಸಲ್ಲಿಸಿದ್ದು, 200 ಯೂನಿಟ್’ಗಿಂತ ಹೆಚ್ಚು ಬಳಸಿದ್ರೆ ಅರ್ಜಿ ರಿಜೆಕ್ಟ್ ಆಗಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.

Join Our Whatsapp Group

ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್,  ‘ಗೃಹಜ್ಯೋತಿ’ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. ಆ.5ರಂದು ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆ ಉದ್ಘಾಟನಾಯಾಗಲಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

200 ಯೂನಿಟ್ ​ಒಳಗೆ ವಿದ್ಯುತ್​ ಬಳಸಿದ್ರೆ ಬಿಲ್ ಪಾವತಿಸುವಂತಿಲ್ಲ. ಒಂದು ವರ್ಷದ ಸರಾಸರಿ ವಿದ್ಯುತ್ ಬಿಲ್ ಪರಿಗಣಿಸಿ ಉಚಿತ ವಿದ್ಯುತ್​ ನೀಡಲಾಗುತ್ತೆ. 200 ಯೂನಿಟ್​ ಗಿಂತ ಹೆಚ್ಚು ಬಳಸಿದರೆ ಅರ್ಜಿ ರಿಜೆಕ್ಟ್ ಆಗಲಿದೆ ಎಂದು ತಿಳಿಸಿದರು.

ಜುಲೈ 27ರೊಳಗೆ ಅರ್ಜಿ ಸಲ್ಲಿಸಿದ್ದರೇ ಜುಲೈ ತಿಂಗಳ ಉಚಿತ ವಿದ್ಯುತ್ ಸಿಗಲಿದೆ. ಜು.27ರ ನಂತರ ಅರ್ಜಿ ಸಲ್ಲಿಸಿದರೇ ಜುಲೈ ತಿಂಗಳ ವಿದ್ಯುತ್ ಬಿಲ್ ಕಟ್ಟಬೇಕು ಎಂದು ತಿಳಿಸಿದರು.

ಹಿಂದಿನ ಲೇಖನಮೈಸೂರು ಪಶ್ಚಿಮ ಆರ್.ಟಿ.ಓ ಕಛೇರಿಯಲ್ಲಿ ಅನಧಿಕೃತ ನೌಕರರ ಹಾವಳಿ: ೩೫ ಮಂದಿ ವಿರುದ್ಧ ಎಫ್.ಐ.ಆರ್ ದಾಖಲು
ಮುಂದಿನ ಲೇಖನಆಗಸ್ಟ್‌ 5ಕ್ಕೆ ‘ಗೃಹ ಜ್ಯೋತಿ’ಗೆ ಸಿಎಂ ಚಾಲನೆ: ಇಂಧನ ಸಚಿವ ಜಾರ್ಜ್‌