ಮನೆ ಸ್ಥಳೀಯ ಮೈಸೂರು: ವೇಶ್ಯಾವಾಟಿಕೆ ಜಾಲ ಪತ್ತೆ-ಇಬ್ಬರ ಬಂಧನ, ಐವರು ಯುವತಿಯರ ರಕ್ಷಣೆ

ಮೈಸೂರು: ವೇಶ್ಯಾವಾಟಿಕೆ ಜಾಲ ಪತ್ತೆ-ಇಬ್ಬರ ಬಂಧನ, ಐವರು ಯುವತಿಯರ ರಕ್ಷಣೆ

0

ಮೈಸೂರು: ನಗರದ ಪ್ರಮುಖ ಬಡಾವಣೆಗಳಲ್ಲಿ ಒಂದಾದ ಆಲನಹಳ್ಳಿ ಬಡಾವಣೆಯ ಮನೆಯೊಂದರಲ್ಲಿ ಮಸಾಜ್ ಸೆಂಟರ್ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಒಡನಾಡಿ ಸೇವಾ ಸಂಸ್ಥೆಯ ಸಹಕಾರದೊಂದಿಗೆ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಐವರು ಯುವತಿಯರ ರಕ್ಷಿಸಿದ್ದಾರೆ.

    ಸಿದ್ದಾರ್ಥ ನಗರಕ್ಕೆ ಹೊಂದಿಕೊಂಡಂತಿರುವ ಹಾಗೂ ಜನನಿಬಿಡಾ ಪ್ರದೇಶದಲ್ಲಿರುವ ಆಲನಹಳ್ಳಿ ಬಡಾವಣೆಯಲ್ಲಿ ವೇಶ್ಯಾವಾಟಿಕೆಯಂತಹ ಕೃತ್ಯ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರ ಗಮನಕ್ಕೆ ಬಾರದಿದ್ದದ್ದು ವಿಪರ್ಯಾಸ. ಮತ್ತೊಂದು ಆಘಾತಕಾರಿ ಅಂಶವೆಂದರೆ, ಮನೆಯ ಮಾಲೀಕರು ನಿವೃತ್ತ ಪೊಲೀಸ್ ಅಧಿಕಾರಿ!

    ಕಳೆದ ಕೆಲವು ತಿಂಗಳಿನಿಂದ ಈ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಒಡನಾಡಿಯ ಸ್ಟ್ಯಾನ್ಲಿ ಹಾಗೂ ಪರಶು ಅವರಿಗೆ ಲಭಿಸಿದೆ. ಅಂದಿನಿಂದಲೇ ಮನೆಯತ್ತ ಗಮನ ಹರಿಸುತ್ತಿದ್ದ ಅವರು ಈ ಸಂಬಂಧ ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ನಡೆಸುತ್ತಿದ್ದರು. ಆನಂತರ ಆಯುಕ್ತರು ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ದಿವಾಕರ್ ಅವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿದ್ದರು.

    ಒಡನಾಡಿ ಸ್ವಯಂ ಸೇವಕರು ಹಾಗೂ ಪೊಲೀಸರ ತಂಡದವರು ಮಂಗಳವಾರ ಸಂಜೆ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಯುವತಿಯರನ್ನ ವೇಶ್ಯಾವಾಟಿಕೆ ಸರಬರಾಜು ಮಾಡುತ್ತಿದ್ದ ಬಾಂಡ್ಲಿ ಮಹೇಶ್ ಹಾಗೂ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಧುಸುಧ ಅಲಿಯಾಸ್ ಚೈತ್ರ ಎಂಬರನ್ನ ಪೋಲಿಸಲು ವಶಕ್ಕೆ ಪಡೆದಿದ್ದಾರೆ. ಐವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.