ಮನೆ ರಾಜಕೀಯ ಸಿಎಂ ಇಬ್ರಾಹಿಂ ಕಾಂಗ್ರೆಸ್ ನಲ್ಲೇ ಉಳಿಯುತ್ತಾರೆ: ತನ್ವೀರ್ ಸೇಠ್

ಸಿಎಂ ಇಬ್ರಾಹಿಂ ಕಾಂಗ್ರೆಸ್ ನಲ್ಲೇ ಉಳಿಯುತ್ತಾರೆ: ತನ್ವೀರ್ ಸೇಠ್

0

ಮೈಸೂರು: ಕಾಂಗ್ರೆಸ್ ವಿರುದ್ಧದ ಅಸಮಧಾನದಿಂದಾಗಿ ಪಕ್ಷ ತೊರೆಯಲು ನಿರ್ಧರಿಸಿರುವ ಸಿಎಂ ಇಬ್ರಾಹಿಂ ಪಕ್ಷದಲ್ಲೇ ಉಳಿಯುತ್ತಾರೆ ಎಂದು ಶಾಸಕ ತನ್ವೀರ್ ಸೇಠ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಇದೇ ತಿಂಗಳ 14 ರಂದು ಕಾಂಗ್ರೆಸ್ ಗೆ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ಸಿಎಂ ಇಬ್ರಾಹಿಂ, ರಾಜೀನಾಮೆ ಬಳಿಕ ತಮ್ಮ ಮುಂದಿನ ನಿರ್ಧಾರ  ಪ್ರಕಟಿಸುವುದಾಗಿ ತಿಳಿಸಿದ್ದರು.

Advertisement
Google search engine

ಇಬ್ರಾಹಿಂ ಕಾಂಗ್ರೆಸ್ ನಲ್ಲೇ ಉಳಿಯುತ್ತಾರೆ. ಅಸಮಾಧಾನ ಆಗಿರೋದು ನಿಜ, ಆದರೆ ಅವರ ಮನವೊಲಿಸುತ್ತೇವೆ. ಸಮಸ್ಯೆ ಬಗ್ಗೆ ಮಾತುಕತೆ ನಡೆಸಿ ಬಗೆಹರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಅಧಿಕಾರ ಸಿಕ್ಕಾಗ ಅನುಭವಿಸೋದು, ಇಲ್ಲದಿದ್ದಾಗ ಅಸಮಾಧಾನಗೊಳ್ಳುವುದು ಸಹಜ. ಸ್ಥಳೀಯ ವಿದ್ಯಾಮಾನಗಳಿಂದ ನೋವಾಗಿರಬಹುದು. ನಮಗೆ ಸಿಎಂ ಇಬ್ರಾಹಿಂ ರವರ ಮೇಲೆ ಗೌರವ ಇದೆ. ಪ್ರಸ್ತುತ ವಿದ್ಯಮಾನಗಳಲ್ಲಿ ಜಾತಿವಾರು ಸ್ಥಾನಮಾನ ಕೇಳುವ ಹಾಗಿಲ್ಲ ಎಂದು ತನ್ವೀರ್ ಸೇಠ್ ತಿಳಿಸಿದರು.

ಸಿದ್ದರಾಮಯ್ಯ ವಿರುದ್ಧ ಸಿಎಂ ಇಬ್ರಾಹಿಂ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಈ ರೀತಿ ಮಾತನಾಡೋದು ತಪ್ಪು  ಎಂದರು.

ಹಿಂದಿನ ಲೇಖನಸಿಡಿ ಪ್ರಕರಣ:  ಅಂತಿಮ ವರದಿ ಸಲ್ಲಿಸಲು ಹೈಕೋರ್ಟ್ ಒಪ್ಪಿಗೆ
ಮುಂದಿನ ಲೇಖನಮಗನಿಂದಲೇ ತಂದೆಯ ಹತ್ಯೆ: ತಾಯಿಯ ಸಾಥ್