ಮನೆ ಅಪರಾಧ ಲಾರಿ – ಬೈಕ್ ಮುಖಾಮುಖಿ ಡಿಕ್ಕಿ: ಮೂವರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲಿಯೇ ಸಾವು

ಲಾರಿ – ಬೈಕ್ ಮುಖಾಮುಖಿ ಡಿಕ್ಕಿ: ಮೂವರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲಿಯೇ ಸಾವು

0

ಕಲಬುರಗಿ: ಜಿಲ್ಲೆಯ ಅಫಜಲಪುರ ಪಟ್ಟಣದ ಹೊರವಲಯದ ಬಳೂರ್ಗಿ ಕ್ರಾಸ್ ಬಳಿಯ ಅಂತಾರಾಜ್ಯ ರಸ್ತೆಯಲ್ಲಿ ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಸಂಭವಿಸಿ ನೇಪಾಳ ಮೂಲದ ಮೂವರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಅಬ್ಜಲ್ಪುರ್ ಪಟ್ಟಣದಲ್ಲಿ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತಿದ್ದ ವ್ಯಕ್ತಿ ಬೈಕಿನಲ್ಲಿ ಪತ್ನಿ ಹಾಗೂ ಮೂವರು ಮಕ್ಕಳ ಸಮೇತ ದುಧನಿಯಿಂದ ಅಫಜಲಪುರಕ್ಕೆ ಆಗಮಿಸುತ್ತಿದ್ದ. ಈ ವೇಳೆಯಲ್ಲಿ ಅಫಜಲಪುರ ಮಾರ್ಗವಾಗಿ ಫರಸಿ (ಕಡಪ) ಕಲ್ಲುಗಳನ್ನು ತುಂಬಿಕೊಂಡು ದುಧನಿ ಕಡೆಗೆ ಹೊರಟಿದ್ದ ಆಂಧ್ರಪ್ರದೇಶ ಮೂಲದ ಲಾರಿ ಹಾಗೂ ಬೈಕಿನ ಮಧ್ಯೆ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಬೈಕಿನಲ್ಲಿ ಹೊರಟಿದ್ದ ತಂದೆ, ತಾಯಿ ಮತ್ತು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಅಫಜಲಪುರ ಐಪಿಎಸ್ ಮಡಿವಾಳಪ್ಪ ಮತ್ತ ಸಿಬ್ಬಂದಿ ಧಾವಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಅಫಜಲಪುರ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಸಾವನ್ನಪ್ಪಿದವರು ಹೆಸರು ಹಾಗೂ ನೇಪಾಳದ ಯಾವ ಜಿಲ್ಲೆ ಮತ್ತು ಊರಿನವರು ಎಂದು ಪತ್ತೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.