ಮನೆ ರಾಜ್ಯ ಆನೇಕಲ್ ನ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟ: ವ್ಯಕ್ತಿಗೆ ಗಂಭೀರ ಗಾಯ

ಆನೇಕಲ್ ನ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟ: ವ್ಯಕ್ತಿಗೆ ಗಂಭೀರ ಗಾಯ

0

ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್​ ಬಳಿಯ ಬನ್ನೇರುಘಟ್ಟದ ಸುದರ್ಶನ್​ ಲೇಔಟ್​ ನ ಮನೆಯೊಂದರಲ್ಲಿನ ಸಿಲಿಂಡರ್​ ಸ್ಫೋಟಗೊಂಡು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಜೇಂದ್ರ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಪೋಟ ಸಂಭವಿಸಿದ ಮನೆಯಲ್ಲಿ ರಾಜೇಂದ್ರ ಹಾಗೂ ಮಗಳು ಇದ್ದರು. ರಾಜೇಂದ್ರ ಎಂದಿನಂತೆ ಇಂದು (ನ.03) ಬೆಳಿಗ್ಗೆ 5 ಗಂಟೆಗೆ ಸಿಲಿಂಡರ್ ಆನ್ ಮಾಡಲು ಹೋಗಿದ್ದರು. ಈ ವೇಳೆ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡಿದೆ.  ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ 3-4 ಮನೆಗಳಿಗೂ ಹಾನಿಯಾಗಿದೆ. ಅಕ್ಕಪಕ್ಕದ ಮನೆಯ ಬಾಗಿಲು ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಹಾಗೂ ಮನೆಯಲ್ಲಿದ್ದ ವಸ್ತುಗಳೆಲ್ಲ ಛಿದ್ರ ಛಿದ್ರ ಆಗಿವೆ. ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ತಾರಸಿ ಸಿಮೆಂಟ್ ತಗಡಿನ ಶೀಟುಗಳು ಧ್ವಂಸವಾಗಿವೆ. ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಹಾಗೂ ಬೈಕ್ ​​ಗಳಿಗೂ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿ, ಬನ್ನೇರುಘಟ್ಟ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ರಾಜೇಂದ್ರ ಕುಟುಂಬ ಆರು ತಿಂಗಳ ಹಿಂದೆ ಬಾಡಿಗೆಗೆ ಬಂದಿದೆ. ರಾಜೇಂದ್ರ ಬನ್ನೇರುಘಟ್ಟ ಪಾರ್ಕ್​ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದಾರೆ. ಮಗಳು, ಅಳಿಯ ರಾಜೇಂದ್ರ ಜೊತೆ ವಾಸವಾಗಿದ್ದಾರೆ. ಘಟನೆ ನಡೆದಾಗ ತಂದೆ ಮಗಳು ಮಾತ್ರ ಇದ್ದರು ಎಂದು ಮನೆ ಮಾಲೀಕ ಶಿವಕುಮಾರ್ ತಿಳಿಸಿದ್ದಾರೆ.