ಮನೆ ಆರೋಗ್ಯ ಮಾತಿನ ಸಮಸ್ಯೆ

ಮಾತಿನ ಸಮಸ್ಯೆ

0

ಅ) ಮ್ಯೂಟಿಸಂ :-  ಕೆಲವು ಮಕ್ಕಳು ಏನು ಮಾತನಾಡದೆ ಮೌನ ವಹಿಸುತ್ತಾರೆ. ಹೀಗೆ ಮೌನ ವಹಿಸಲು ಕೆಲವರಿಗೆ ಮಾನಸಿಕ ಕಾಯಿಲೆ ಕಾರಣವಾಗಿದ್ದರೆ ಇನ್ನೂ ಕೆಲವರಿಗೆ ಅವರ ಮನಸ್ಥಿತಿ ಕಾರಣವಾಗಿರುತ್ತದೆ. ಕೆಲವರು ಯಾವತ್ತಿಗೂ ಮಾತನಾಡುವುದಿಲ್ಲ. ಅದು ಅವರ ಶರೀರ ರಚನೆಯ ದೋಷ. ಮತ್ತೆ ಕೆಲವರು ಪರಿಚಿತರ ಬಳಿ ಮಾತ್ರ ಮಾತನಾಡಿ, ಅಪರಿಚಿತರ ಬಳಿ ತುಟಿ ಬಿಚ್ಚುವುದಿಲ್ಲ. ಇಂತಹ ಸಮಸ್ಯೆಯನ್ನು ಎಲೆಕ್ಟಿವ್ ಮ್ಯೂಟಿಸಂ ಎನ್ನುತ್ತಾರೆ.

ಆ) ತೊದಲು :- ಇದು 2 ರಿಂದ 5 ವರ್ಷಗಳ ಮಧ್ಯದ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತೊದಲು ಹೆಣ್ಣು ಮಕ್ಕಳಿಗಿಂತಲೂ ಗಂಡು ಮಕ್ಕಳಲ್ಲಿ ಹೆಚ್ಚು. ಅದರಲ್ಲೂ ಕೆಲವು ವಿಶೇಷ ಸಂದರ್ಭಗಳಲ್ಲಿ ಅಪರಿಚಿತರ ಬಳಿ ತೊದಲು ಹೆಚ್ಚಾಗುತ್ತದೆ.

ತೊಗರಿಗೆ ಹಲವಾರು ಕಾರಣಗಳಿವೆ. ತಾನು ನಿರ್ಲಕ್ಷಿಸಲ್ಪಡುತ್ತಿದ್ದೇನೆಂಬ ಭಾವ ತೊದಲಿಗೆ  ದಾರಿ ಮಾಡಿಕೊಡುತ್ತದೆ. ತಂದೆ ತಾಯಿಯರು ಮತ್ತು ಉಪಾಧ್ಯಾಯರು ಶಿಕ್ಷಿಸುತ್ತಿದ್ದರು ಕೂಡ ತೊದಲು ಬರುತ್ತದೆ. ಕೆಲವು ಕುಟುಂಬಗಳಲ್ಲಿ ವಂಶ ಪಾರಂಪರ್ಯವಾಗಿ ತೊದಲು ಬರುತ್ತದೆ. ನಾಲಿಗೆ ಚಿಕ್ಕದಾಗಿದ್ದರೆ, ಬುದ್ಧಿಮಾಂದ್ಯತೆ, ಶ್ರವಣದೋಷವಿದ್ದರೂ ತೊದಲು ಬರುತ್ತದೆ.            

ತೊದಲು ಇದ್ದಾಗ ಕಾರಣವನ್ನು ಪರಿಶೀಲಿಸಬೇಕು. ಬಹಳಷ್ಟು ಮಕ್ಕಳ ಸ್ವಲ್ಪ ಬಲಿತನಂತರ ಹತ್ತಾರು ಮಂದಿಯೊಂದಿಗೆ ಬೆರೆತಂತೆಲ್ಲ ತೊದಲು ಹೊರಟು ಹೋಗುತ್ತದೆ. ತೊದಲಿರುವ ಮಕ್ಕಳನ್ನು ಹಂಗಿಸಬಾರದು ಸ್ವಿಚ್ ಥೆರಪಿ, ಸೈಕಾಲಜಿಕಲ್ ಕೌನ್ಸಿಲಿಂಗ್ ಮೂಲಕ ತೊದಲನ್ನು  ಹೋಗಲಾಡಿಸಬಹುದು.     

7. ಶಾಲೆಯ ಸಮಸ್ಯೆಗಳು :-

ಅ) ಸ್ಕೂಲ್ ಫೋಬಿಯಾ :- ಇದು ಬಹಳಷ್ಟು ಮಕ್ಕಳಲ್ಲಿರುತ್ತದೆ. ಶಾಲೆ ಎಂದರೆ ಗಡಗಡ ನಡುಕ ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಶಾಲೆ ವಾತಾವರಣ ಹಿಡಿಸದಿರುವುದು ಸ್ವಲ್ಪ ಕಾರಣವಾದರೆ, ತಾಯಿಯಿಂದ ಬೇರೆ ಆಗಿರುವುದು ಮತ್ತಷ್ಟು ಕಾರಣ. ಇವರಲ್ಲಿ ಗೊಂದಲ ಗಾಬರಿ ಹೆಚ್ಚಾಗಿರುತ್ತದೆ. ಪ್ರೀತಿಪೂರ್ವಕವಾದ ಮಾನಸಿಕ ಶಿಕ್ಷಣದಿಂದ ಸ್ಕೂಲ್ ಫೋಬಿಯಾವನ್ನು ನಿವಾರಿಸಬಹುದು. ಇದಕ್ಕೆ ತಂದೆ ತಾಯಿಗಳ ಮತ್ತು ಅಧ್ಯಾಪಕರ ಪಾತ್ರ ಬಹಳ ಮುಖ್ಯವಾದದ್ದು.

8. ಸ್ಲಿಪ್ ಡಿಸಾರ್ಡರ್ಸ್ (ನಿದ್ರಾ ದೋಷಗಳು) :-

ಅ) ಸೋಮನಾಂಬುಲಿಜಂ (ನಿದ್ರೆಯಲ್ಲಿ ನಡೆಯುವುದು) :- ಕೆಲವು ಮಕ್ಕಳು ನಿದ್ರೆಯಲ್ಲಿ ಎದ್ದು ನಡೆಯುತ್ತಾ ಹೊರಕ್ಕೆ ಹೋಗುತ್ತಾರೆ. ಹಾಗೆ ಬಹಳ ದೂರ ನಡೆಯುತ್ತಾರೆ. ಮತ್ತೆ ಕೆಲವರು ನಿದ್ರೆಯಲ್ಲಿ ಎದ್ದು ಉಡುಪು ಧರಿಸುವುದು, ಬಾಗಿಲು ತೆಗೆಯುವುದು ಕೂಡ ಮಾಡುತ್ತಾರೆ. ಯಾವುದೇ ಕೆಲಸವನ್ನು ಪ್ರಜ್ಞೆ ಇದ್ದೂ ಮಾಡುವುದಿಲ್ಲ. ಇಂತಹ ಮಕ್ಕಳಿಗೆ ಮಾನಸಿಕ ಶಿಕ್ಷಣ ಕೊಟ್ಟು ಸೋಮನಾಂಬುಲಿಜಂ ಅನ್ನು ಸರಿಪಡಿಸಬಹುದು. ಅಲ್ಪ ಪ್ರಮಾಣದಲ್ಲಿ ಬೆಂಜೋಡೈಜಪಿನ್ಸ್ ಇಲ್ಲದೆ ಇಂಪಿರಮೈನ್ ಔಷಧಿಗಳನ್ನ ಕೊಟ್ಟು, ನಿದ್ರೆಯಲ್ಲಿ ನಡೆವುದನ್ನು ನಿಲ್ಲಿಸಬಹುದು.

ಆ) ನೈಟ್ ಟೆರರ್ (ಸ್ಲೀಪ್ ಟೆರರ್) :- ಕೆಲವು ಮಕ್ಕಳು ನಿದ್ರೆಯಲ್ಲಿ ಭಯಂಕರವಾಗಿ ಅರಚುತ್ತಾ ಎದ್ದು ಕೂರುತ್ತಾರೆ. ಇಲ್ಲವೇ ನಿದ್ರೆಯಲ್ಲಿ ಭಯಂಕರವಾಗಿ ಅರಚುತ್ತಾರೆ. ಭಯದಿಂದ ನಡಗುತ್ತಾರೆ. ಸೂಕ್ತ ಮಾನಸಿಕ ಶಿಕ್ಷಣದ ಮೂಲಕ ಈ ಟೆರರನ್ನು ಹೋಗಲಾಡಿಸಬಹುದು.   ಡೈಜಿಪಾಮ್ ಇಲ್ಲವೇ ಇಂಪೆರಿಮೈನ್  ಔಷಧಿಗಳನ್ನು ಬಳಸುವುದು.

ಇ) ಕಡಿಮೆ ನಿದ್ರೆ :- ಕೆಲವು ಮಕ್ಕಳು ಬಹಳ ಕಡಿಮೆ ನಿದ್ರೆ ಮಾಡುತ್ತವೆ. ಅದಕ್ಕೆ ಕಾರಣ ಆಹಾರ ಸಾಕಷ್ಟು ಇಲ್ಲದಿರುವುದು. ಹಸಿವು, ಯಾವುದಾದರೊಂದು ನೋವು, ಹಾಸಿಗೆಯ ಬಟ್ಟೆಗಳು ಮೂತ್ರದಿಂದ ಒದ್ದೆಯಾಗಿರುವುದು, ಅನಾರೋಗ್ಯ ಇತ್ಯಾದಿ. ಕಾರಣವನ್ನು ಗುರುತಿಸಿ ಚಿಕಿತ್ಸೆಮಾಡಿದರೆ ಎಲ್ಲರಂತೆ ನಿದ್ರೆ ಮಾಡುತ್ತದೆ.