ಮನೆ ಕಾನೂನು ಮಾಹಿತಿ ಹಕ್ಕು ಕಾಯ್ದೆಯನ್ವಯ ದಾಖಲೆ ನೀಡದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಆದೇಶ

ಮಾಹಿತಿ ಹಕ್ಕು ಕಾಯ್ದೆಯನ್ವಯ ದಾಖಲೆ ನೀಡದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಆದೇಶ

0

ಹೆಚ್ ಡಿ ಕೋಟೆ: ಹೆಚ್ ಡಿ ಕೋಟೆ ತಾಲ್ಲೂಕು ಬಿದರಹಳ್ಳಿ ಗ್ರಾಮದ ಸ.ನಂ.71/1, 61 ಮತ್ತು 71/2 ರ ಜಮೀನಿಗೆ ಸಂಬಂಧಿಸಿದಂತೆ 1997-98ನೇ ಇಸವಿಯಲ್ಲಿ ಖಾತೆ ಮಾಡಿರುವ ಎಂ.ಆರ್ ಕಡತವು ಖಾಯಂ ಕಡತವಾಗಿದ್ದು, ಕಡತ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲು ಹೆಚ್ ಡಿ.ಕೋಟೆ ತಹಶೀಲ್ದಾರ್ ಗೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಹುಣಸೂರು ಉಪ ವಿಭಾಗದ ಉಪವಿಭಾಗಾಧಿಕಾರಿ ಸೂಚನೆ ನೀಡಿದ್ದಾರೆ.

ಸರಗೂರು ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಲಿಂಗನಾಯಕ ಎಂಬುವವರು ಹೆಚ್.ಡಿ.ಕೋಟೆ ತಹಶೀಲ್ದಾರ್ ಅವರಿಗೆ ಮೇಲ್ಮನವಿ ಸಲ್ಲಿಸಿದ್ದು, ಅದರಲ್ಲಿ ಬಿದರಹಳ್ಳಿ ಗ್ರಾಮದ ಸ.ನಂ. 71/1, 61 ಮತ್ತು 71/2 ರ ಜಮೀನಿಗೆ ಸಂಬಂಧಿಸಿದಂತೆ 1997-98ನೇ ಇಸವಿಯಲ್ಲಿ ಖಾತೆ ಮಾಡಿರುವ ಎಂ.ಆರ್ ಕಡತಗಳ ದೃಢೀಕೃತ ನಕಲು ಕೋರಿದ್ದರು. ಈ ಸಂಬಂಧ ಹೆಚ್.ಡಿ.ಕೋಟೆ ಅವರು ಮಾಹಿತಿ ನೀಡಿರುವುದಿಲ್ಲವೆಂದು ಮೇಲ್ಮನವಿ ಸಲ್ಲಿಸಿದ್ದಾರೆ.

ಅರ್ಜಿದಾರರ ಮೇಲ್ಮನವಿ ಪರಿಗಣಿಸಿ ನ್ಯಾಯಾಲಯವು 2021ರ ಡಿಸೆಂಬರ್ 6 ಮತ್ತು 20 ರಂದು ಮೇಲ್ಮನವಿದಾರರು ಮತ್ತು ಪ್ರತಿವಾದಿಗಳ ವಿಚಾರಣೆ ನಡೆಸಿದಾಗ ಸಂಬಂಧಿಸಿದ ಕಡತವು ಲಭ್ಯವಿರುವುದಿಲ್ಲ ಎಂದು ಪ್ರತಿವಾದಿಗಳು ತಿಳಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಅವಲೋಕಿಸಿ ಕಡತ ಕಾಣೆಯಾಗಿರುವ ಕುರಿತು ದೂರು ದಾಖಲಿಸುವಂತೆ ತಹಶೀಲ್ದಾರ್ ಗೆ ನ್ಯಾಯಾಲಯವು ಸೂಚಿಸಿದೆ.