ಮನೆ ಜ್ಯೋತಿಷ್ಯ ಸ್ವಾತಿ ನಕ್ಷತ್ರ

ಸ್ವಾತಿ ನಕ್ಷತ್ರ

0

ಕ್ಷೇತ್ರ – ತುಲಾ ರಾಶಿಯಲ್ಲಿ 6 ಡಿಗ್ರಿ 40 ಕಡೆಯಿಂದ 20 ಡಿಗ್ರಿ, ರಾಶಿಸ್ವಾಮಿ – ಶುಕ್ರ, ನಕ್ಷತ್ರ ಸ್ವಾಮಿ – ರಾಹು, ಗಣ – ದೇವ, ನಾಡಿ –   ಅಂತ್ಯ, ಯೋನಿ – ಮಹಿಷ, ನಾಮಾಕ್ಷರ – ರೂ,ರೇ, ರೋ,ತಾ. ಶರೀರ ಭಾಗ – ಚರ್ಮ, ಹಾರ್ನಿಯಾ, ಮೂತ್ರಾಶಯ, ಗುದದ್ವಾರ.

ರೋಗಗಳು :- ಮೂತ್ರದಲ್ಲಿ ಉರಿ, ಚರ್ಮರೋಗ, ಗರ್ಭಾಶಯದ ಹುಣ್ಣು, ಚರ್ಮವಿಕಾರ, ಗಾಯ, ವಿಕ್ಸೀಮಾರೋಗ.

ಸಂರಕ್ಷಣೆ :- ಈ ನಕ್ಷತ್ರದಲ್ಲಿ ಜನಿಸಿದವರು ಸಂವೇದನಾಶೀಲರು, ಪ್ರಾಮಾಣಿಕರು, ನ್ಯಾಯಪ್ರಿಯರು, ಸ್ಪಷ್ಟವಾದಿಗಳು, ವಿವೇಕದಿಂದ ತಿಳಿಯುವರು, ಭಾವುಕರಾಗಿ ಚಿಂತಿಸುವುದು, ಮಾನವತ ಪೂರ್ಣ ವ್ಯವಹಾರ, ಉತ್ತಮ ವ್ಯವಸಾಯ ಮಾಡುವದು, ಪ್ರೀತಿಯಿಂದ ಇರುವವರು, ಉತ್ತಮ ಸ್ಮರಣ ಶಕ್ತಿ ಹೊಂದಿದವರು, ಸದಾಚಾರಿಗಳು ಆಗಿರುತ್ತಾರೆ.

ಉದ್ಯೋಗ ಮತ್ತು ವಿಶೇಷ :- ಒಳ್ಳೆಯವರಾದ, ಅಸ್ಥಿರ ಚಿತ್ರದ ಈ ನಕ್ಷತ್ರದವರು ತಿರುಗಾಡುತ್ತ ವ್ಯವಹಾರವನ್ನು ಮಾಡುವರು, ವಾಹನ ಪ್ರವಾಸಿ ವ್ಯವಸ್ಥೆ, ಯಾತ್ರೆ ,ಸಂಗೀತ, ಉತ್ಸವ, ನಾಟಕ, ಕಲೆ, ಚಿತ್ರಕಲೆ, ಯಂತ್ರ, ತಂತ್ರ ವಿದ್ಯುತ್ ಉಪಕರಣಗಳು, ಕಂಚಿನ ವಸ್ತುಗಳ ಬಲ್ಪ್ಸ್, ಸ್ಥಾನಗ್ರಹದ ವಸ್ತುಗಳು, ಬೇಕರಿ ವಸ್ತುಗಳು, ಹಾಲು ಹಾಲಿನ ಉತ್ಪನ್ನಗಳ ಮಾರಾಟ, ಅಡಿಗೆ ಮನೆಯ ಉಪಯೋಗ ವಸ್ತುಗಳು, ಕಾರ್ಯಕ್ರಮ ಉದ್ಘಾತಕರು, ನರ್ತಕಿಯರು, ಹೀಗೆ ಎಲ್ಲದರೊಡನೆ ಸಂಬಂಧ ಹೊಂದಬಹುದಾಗಿದೆ.

ಶುಕ್ರನ ರಾಶಿಯಲ್ಲಿ ಚಂದ್ರನ ನಕ್ಷತ್ರದಲ್ಲಿ ಜನಿಸಿದವರು, ಉತ್ತಮ ಶರೀರ ಹೊಂದಿದವರು ವೀರರು ನಾಯಕರು, ಭಾಗ್ಯಶಾಲಿಗಳು, ಸಿಟ್ಟಿನ ಪ್ರಕೃತಿಯವರು ಆಗುವವರು, ಉತ್ತಮ ವಿಚಾರ ಶಕ್ತಿ ಇರುವ, ಆಗತಕ್ಕೊಳಗಾಗುವ, ಹಠವಿರುವವರಾಗಿರುವವರು. ಸೂರ್ಯನು ಈ ನಕ್ಷತ್ರದಲ್ಲಿ ಕಾರ್ತಿಕ ಮಾಸದಲ್ಲಿ ಸುಮಾರು 13 ದಿನ ಇರುತ್ತಾನೆ. ಚಂದ್ರನು 27 ದಿನಗಳಿಗೊಮ್ಮೆ ಒಂದು ದಿನ ಇರುತಾನೆ. ಈ ನಕ್ಷತ್ರದವರು ಕಲಾವಿದರು, ವಿಜ್ಞಾನಿಗಳು, ಮಹತ್ವದ ಕೃತಿಗಳನ್ನು ರಚಿಸುವವರು ಆಗಬಹುದಾಗಿದೆ.