ಮನೆ ಅಪರಾಧ ಎರಡು ಬೈಕ್ ಗಳ ನಡುವೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಎರಡು ಬೈಕ್ ಗಳ ನಡುವೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

0

ನೆಲಮಂಗಲ: ಎರಡು ಬೈಕ್’​ಗಳ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸಿದ್ದನಹೊಸಹಳ್ಳಿ ಬಳಿ ನಡೆದಿದೆ.

ರಾಜೇಶ್ (45), ಹೆಗ್ಗಡದೇವನಪುರದ ಧನರಾಜ್ (24) ಮೃತ ದುರ್ದೈವಿಗಳು.

ಶಂಕರ್, ಮಹೇಶ್​ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.