ಚಿತ್ರದುರ್ಗ: ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಬಳಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, 3 ಕೋಟಿ ಮೌಲ್ಯದ ಆನೆದಂತ, ಶ್ರೀಗಂಧ ಮತ್ತು ರಕ್ತಚಂದನ ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮೂಲದ ಚಂದ್ರಶೇಖರ್ ಹಾಗೂ ತಮಿಳುನಾಡು ಮೂಲದ ಖಲೀಲ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಸೌದೆ ವ್ಯಾಪಾರ ಮಾಡುವುದಾಗಿ ಹೇಳಿ ಬಬ್ಬೂರು ಗ್ರಾಮದ ಬಳಿ ನಾರಾಯಣಪ್ಪ ಎಂಬುವರ ಮನೆಯನ್ನು ಲೀಸ್ ಗೆ ಪಡೆದ್ದರು.
ಮನೆಯಲ್ಲಿ ಅಕ್ರಮವಾಗಿ ಆನೆದಂತ, ಶ್ರೀಗಂಧ ಮತ್ತು ರಕ್ತಚಂದನ ಸಂಗ್ರಹಿಸಿದ್ದರು. ಖಚಿತ ಮಾಹಿತಿ ಮೇರೆಗೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಠಾಣೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು 3 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ. ಚಿತ್ರದುರ್ಗ ಎಸ್ ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ಮೈಸೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆಗಳು
ಶೂನ್ಯ ಸಂಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಶಾಸಕ ನಾಗೇಂದ್ರ
ವೇದವ್ಯಾಸಚಾರ್ ಶ್ರೀಷಾನಂದರ ಮೇಲೆ ಸುಪ್ರೀಂ ಕೋರ್ಟ್ ಗರಂ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಲ್ಲದ ಎತ್ತೆತ್ತರ ಏರುತ್ತಿರುವ ಅಕ್ರಮ ಕಟ್ಟಡಗಳು….
ಬಳ್ಳಾರಿಯಲ್ಲಿ ಸ್ಟಾಪ್ ನರ್ಸ್ ಹುದ್ದೆಗಳಿಗೆ ಭರ್ತಿ….
ಕೆಪಿಎಸ್ಸಿ ಯಿಂದ ಕೃಷಿ ಇಲಾಖೆಯಲ್ಲಿ ಹುದ್ದೆಗಳು
ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಹುದ್ದೆಗಳು
ಮೈಸೂರಿನಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಪ್ರೊಫೆಸರ್ ಹುದ್ದೆಗಳು
ಕೆಪಿಎಸ್ಸಿ ಹುದ್ದೆಯ 327 ಗ್ರೂಪ್ ಬಿ ಗ್ರೂಪ್ ಸಿ ಹುದ್ದೆಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.