ಮನೆ ದೇವಸ್ಥಾನ ಹಾಸನಾಂಬೆ ಗರ್ಭಗುಡಿ ಪ್ರವೇಶಿಸಿ ದರ್ಶನ ಪಡೆಯಲು ನಿರ್ಬಂಧ

ಹಾಸನಾಂಬೆ ಗರ್ಭಗುಡಿ ಪ್ರವೇಶಿಸಿ ದರ್ಶನ ಪಡೆಯಲು ನಿರ್ಬಂಧ

0

ಹಾಸನ: ಹಾಸನಾಂಬ ದೇವಾಲಯ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಾಸನಾಂಬೆ ಗರ್ಭಗುಡಿ ಒಳಗಡೆ ಪ್ರವೇಶ ಮಾಡಿ ದರ್ಶನ ಪಡೆಯುವುದಕ್ಕೆ ಸಂಪೂರ್ಣ ಬ್ರೇಕ್ ಹಾಕಿದೆ.

ಶುಕ್ರವಾರ ರಾತ್ರಿಯಿಂದಲೇ‌ ಜಾರಿಗೆ ಬರುವಂತೆ ಅರ್ಚಕರನ್ನು ಹೊರತುಪಡಿಸಿ ಉಳಿದ ಯಾರಿಗೂ ಗರ್ಭಗುಡಿ ಪ್ರವೇಶವಿಲ್ಲವೆಂದು ಅಂತೆಯೇ ಹಾಗೆ ಶಿಷ್ಟಾಚಾರ ದರ್ಶನ ವ್ಯವಸ್ಥೆಯನ್ನು ಕೂಡ ಸ್ಥಗಿತಗೊಳಿಸಿ ದೇವಾಲಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಗಣ್ಯರು, ಅತಿಗಣ್ಯರು ಗರ್ಭಗುಡಿ ಪ್ರವೇಶ ಮಾಡಿ ದರ್ಶನ ಪಡೆಯುತ್ತಿದ್ದರು. ಹಾಗೇ ಶಿಷ್ಟಾಚಾರ ಕೋಟಾದಡಿಯಲ್ಲೂ ಗರ್ಭಗುಡಿ ಒಳಗೆ ಪ್ರವೇಶ ದರ್ಶನ ಪಡೆಯುತ್ತಿದ್ದರು. ಇದರಿಂದ ಧರ್ಮದರ್ಶನ ಸಾಲಿನಲ್ಲಿ ಬರುವ ಅಪಾರ ಭಕ್ತರಿಗೆ ತೊಂದರೆಯಾಗುತ್ತಿತ್ತು.

ಈ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಜನರ ಒತ್ತಡಕ್ಕೆ ಮಣಿದು ಆಡಳಿತ ಮಂಡಳಿ ಮಹತ್ತರ ನಿರ್ಣಯ ಕೈಗೊಂಡಿದೆ.