ಮನೆ ಸ್ಥಳೀಯ ಸ್ವಚ್ಛ ದೀಪಾವಳಿ, ಶುಭ ದೀಪಾವಳಿ, ಜಲ ದೀಪಾವಳಿ ಉದ್ಘಾಟಿಸಿದ ಶಾಸಕ ಜಿ.ಟಿ.ದೇವೇಗೌಡ

ಸ್ವಚ್ಛ ದೀಪಾವಳಿ, ಶುಭ ದೀಪಾವಳಿ, ಜಲ ದೀಪಾವಳಿ ಉದ್ಘಾಟಿಸಿದ ಶಾಸಕ ಜಿ.ಟಿ.ದೇವೇಗೌಡ

0

ಮೈಸೂರು: ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಇಂದು ಶಾಸಕರಾದ ಜಿ.ಟಿ. ದೇವೆಗೌಡರವರು, ಸ್ವಚ್ಛ ದೀಪಾವಳಿ, ಶುಭ ದೀಪಾವಳಿ ಹಾಗೂ ಜಲ ದೀಪಾವಳಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ರಿಂಗ್‌ ರಸ್ತೆಯಿಂದ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಸಂಪರ್ಕ ರಸ್ತೆಯ‌ ಗುದ್ದಲಿ ಪೂಜೆ ಮಾಡಿದರು.

ಈ‌ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಜಿ.ಟಿ ದೇವೆಗೌಡರವರು ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರಿದರು. ದೀಪವನ್ನು ಹಚ್ಚಿ ಎಲ್ಲರ ಜೀವನದಲ್ಲೂ ಈ ದೀಪಾವಳಿ ಒಳಿತನ್ನು ತರಲಿ ಬಾಳಿನ ಕತ್ತಲು ತೊರೆತಲಿ, ಎಲ್ಲರ ಕುಟುಂಬದಲ್ಲಿ ಸಂತಸ‌ ತರಲಿ ಎಂದರು.

ಮಕ್ಕಳಿಗೆ ಪಟಾಕಿ ಹೊಡೆಯುವುದು ಎಂದರೆ ಸಂತೋಷ ಆದರೆ ಪಟಾಕಿಗಳನ್ನು ಹೊಡೆಯಬೇಕಾದರೆ ಎಚ್ಚರಿಕೆ ಇಂದ ಬರಬೇಕು, ಪಟಾಕಿಗಳನ್ನು ಕಡಿಮೆ ಮಾಡಿ ಹಣತೆಗಳನ್ನು ಹೆಚ್ಚು ಹಚ್ಚಬೇಕು. ಬೆಳಕೆಂಬುದು ಯಾವಾಗಲೂ ಶುಭದ ಸಂಕೇತ, ಈ‌ ದೀಪದ ಜ್ಯೋತಿಯು ದೇಶಕ್ಕೆ ಒಳ್ಳೆಯದು ಮಾಡಲಿ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ರವರು,  ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಛ ದೀಪಾವಳಿಯ ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ ಸಾರ್ವಜನಿಕರು ಸಹಕರಿಸಬೇಕು ಕೆಲವು ಪಟಾಕಿ ಹೊಡೆಯುವುದು ಪರಿಸರಕ್ಕೆ ಹಾನಿಯಾಗಿ ಪ್ರಾಣಿ ಪಕ್ಷಿ ಸೇರಿದಂತೆ ಎಲ್ಲರಿಗೂ ತೊಂದರೆ ಆಗುತ್ತದೆ. ಆದರೆ ದೀಪಾವಳಿ ಎಂದರೆ ಅದು ಪಟಾಕಿಯ ಸಂಭ್ರಮ, ಅಂತಹ ಸಂಭ್ರಮಕ್ಕಾಗಿ ಹಸಿರು ಪಟಾಕಿಗಳು ಬಂದಿವೆ, ಪಟಾಕಿಗಳನ್ನು ಹೊಡೆಯುವವರು ಹಸಿರು ಪಟಾಕಿಗಳನ್ನು ಹೊಡೆದು ಪರಿಸರದ ಕಾಳಜಿಯನ್ನು ತೋರಬೇಕು ಹಾಗೂ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಪಟಾಕಿಗಳನ್ನು ಸಿಡಿಸಿದ ನಂತರ ಒಂದು ಕಡೆ ಸಂಗ್ರಹಿಸಿಟ್ಟು ಪಟ್ಟಣ ಪಂಚಾಯಿತಿಯ ಸ್ವಚ್ಚತಾ ವಾಹನ ಬಂದಾಗ ಪಟಾಕಿಯ ತ್ಯಾಜ್ಯವನ್ನು ಅದಕ್ಕೆ ಹಾಕಬೇಕು, ಪಟಾಕಿಯ ಮದ್ದುಗಳು ವಿಷಪೂರಿತವಾಗಿದ್ದು, ಹಸು ಕರು ಸೇರಿದಂತೆ ಯಾವುದೇ ಪ್ರಾಣಿಪಕ್ಷಿಗಳು ಪಟಾಕಿ ತ್ಯಾಜ್ಯ ಮದ್ದು ಮಿಶ್ರಿತವಾದ ಆಹಾರ ಸೇವಿಸಿದರೆ ಪ್ರಾಣಹಾನಿ ಆಗುತ್ತದೆ,‌ ದಯಮಾಡಿ ಸಾರ್ವಜನಿಕರು ಸ್ವಚ್ಛ ದೀಪಾವಳಿ, ಹಸಿರು ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಬೇಕೆಂದರು.

ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷ ಕೆ.ಆರ್.‌ಗಣೇಶ್ ಮಾತನಾಡಿ,  ಹಿಂದೂ ಧರ್ಮದಲ್ಲಿ ದೀಪಾವಳಿ ಅಂತ್ಯತ ದೊಡ್ಡ ಹಬ್ಬ ನಾಲ್ಕು ದಿನಗಳ ಕಾಲ ಆಚರಣೆ ಮಾಡುವ ದೀಪಾವಳಿ ಭಾರತದ ಗಡಿ‌ದಾಟಿ ಇಂದು ವಿಶ್ವಾದ್ಯಂತ ಹಲವಾರು ದೇಶಗಳಲ್ಲಿ ಆಚರಿಸುತ್ತಿರುವುದು ನಮ್ಮ ಹೆಮ್ಮೆಯ ಸಂಗತಿ‌ ಎಂದರು. ದೀಪಾವಳಿ ಎಂದರೆ ದೀಪಗಳ ಹಬ್ಬ ಎಲ್ಲರೂ ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸಿ ಎಂದು ತಿಳಿಸಿದರು.

ಈ‌‌ ಸಂದರ್ಭದಲ್ಲಿ ಇಂಜಿನಿಯರ್ ಶಿವಕುಮಾರ್, ಆರೋಗ್ಯ ಅಧಿಕಾರಿ ಪರಮೇಶ್ವರ್,  ಸಮುದಾಯ ಅಧಿಕಾರಿ ಶ್ರೀನಿವಾಸ್, ಉಪಾಧ್ಯಕ್ಷರಾದ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಪುನೀತ್, ಕಾರ್ಯದರ್ಶಿ ನಾಗಭೂಷಣ, ಜಂಟಿ ಕಾರ್ಯದರ್ಶಿ ಪಾರ್ಶ್ವನಾಥ್, ನಿರ್ದೇಶಕರಾದ ಮಹೇಶಪ್ಪ, ಪೃಥು ಪಿ ಅದ್ವೈತ್, ಬಡಾವಣೆಯ ನಿವಾಸಿಗಳು , ಮಹಿಳಾ ಮುಖಂಡರಾದ ಕಮಲಾ‌ ನಟರಾಜ್,  ಸರಸ್ವತಿ, ಪೂಜಾ ಪುನೀತ್, ಉಮಾ ಪುಟ್ಟರಾಜು, ಶೈಲ, ನಿರ್ಮಲ ಸೇರಿದಂತೆ ಇತರರು ಹಾಜರಿದ್ದರು.‌