ಮನೆ ಕ್ರೀಡೆ ಚಿತ್ರರಂಗಕ್ಕೆ ಕಾಲಿಟ್ಟ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್

ಚಿತ್ರರಂಗಕ್ಕೆ ಕಾಲಿಟ್ಟ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್

0

ಬೆಂಗಳೂರು(Bengaluru): ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಚಿತ್ರರಂಗಕ್ಕೆ ಪಾದಾಪರ್ಣೆ ಮಾಡಿದ್ದು,  ಸದ್ಯದಲ್ಲೇ ತೆರೆ ಕಾಣಲಿರುವ ತಮಿಳು ಚಿತ್ರ ‘ಕೋಬ್ರಾ’ ದಲ್ಲಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ತಮಿಳು ಚಿತ್ರರಂಗದ ಹೆಸರಾಂತ ನಟ ವಿಕ್ರಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಖ್ಯಾತಿಯ ಕನ್ನಡದ ಶ್ರೀನಿಧಿ ಶೆಟ್ಟಿ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಅಭಿಮಾನಿಗಳು ಕೋಬ್ರಾ ಚಿತ್ರದ ಟ್ರೇಲರ್ ಅನ್ನು ಸಂತೋಷದಿಂದ ಬರಮಾಡಿಕೊಂಡಿದ್ದು, ಯೂಟ್ಯೂಬ್‌ನಲ್ಲಿ 85 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ತಮಿಳಿನ ಆಕ್ಷನ್-ಥ್ರಿಲ್ಲರ್ ಕೋಬ್ರಾ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ವಿಕ್ರಂ ಜೊತೆಗೆ ಪಠಾಣ್ ನಟನೆಯ ಬಗ್ಗೆಯೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕ್ರಿಕೆಟಿಗರಾದ ಸುರೇಶ್ ರೈನಾ, ರಾಬಿನ್ ಉತ್ತಪ್ಪ, ದೀಪಕ್ ಹೂಡಾ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.

ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್, ಸ್ಪಿನ್ನರ್ ಹರಭಜನ್ ಸಿಂಗ್ ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈಗ ಪಠಾಣ್ ಕೂಡ ಬಣ್ಣ ಹಚ್ಚಿದ್ದಾರೆ. ಚಿತ್ರ ಆಗಸ್ಟ್ 31ರಂದು ತೆರೆ ಕಾಣಲಿದೆ.

ಹಿಂದಿನ ಲೇಖನಪಿಎಸ್’ಐ ಅಕ್ರಮ ನೇಮಕಾತಿ: ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದ ರಚನಾ ಹನುಮಂತ ಬಂಧನ
ಮುಂದಿನ ಲೇಖನಮೈಸೂರು: ಅನಧಿಕೃತ ಬಡಾವಣೆ ತೆರವು