ಉತ್ಕಟ – ಬಲವತ್ತಾರವಾದುದು, ಭಯಂಕರವಾದದು, ಏರುಪೇರುಗಳಿಂದ ಕೂಡಿ ಸಮಾನಾಗಿಲ್ಲದಿರುವುದು ಎಂದರ್ಥ. ಈ ಆಸನದ ನಿಲುವು ಕಲ್ಪನಾ (ಊಹಾ) ಪೀಠದಲ್ಲಿ ಕುಳಿತಂತೆ ತೋರುವುದು.
ಅಭ್ಯಾಸ ಕ್ರಮ :-
೧. ಮೊದಲು ತಡಾಸನದಲ್ಲಿ ನಿಲ್ಲಬೇಕು. ತೋಳುಗಳನ್ನು ತಲೆಯ ಮೇಲೆ ನೇರವಾಗಿ ಎತ್ತಿ ಹಿಡಿದು, ಅಂಗೈಗಳೆರಡನ್ನು ಜೋಡಿಸಿಡಬೇಕು.
೨. ಉಸಿರನ್ನು ಹೊರಕ್ಕೆ ಬಿಟ್ಟು ಮಂಡಿಗಳನ್ನ ಭಾಗಿಸಿ ಮುಂಡಬಾಗವನ್ನು ಭಾಗಿಸಿ, ತೊಡೆಗಳೆರಡನ್ನು ನೆಲಕ್ಕೆ ಸಮಾನಾಂತರವಾಗಿರಬೇಕು.
೩. ಮುಂದೆ ಭಾಗದೆ, ಎದೆಭಾಗವನ್ನು ಆದಷ್ಟು ಹಿಂದಕ್ಕಿರಿಸಿ ಸಾಮಾನ್ಯವಾಗಿ ಉಸಿರಾಡುತ್ತಿರಬೇಕು.
೪. ಈ ಭಂಗಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ ನೆಲೆಸಬೇಕು. ಈ ಸ್ಥಿತಿಯಲ್ಲಿ ಸಮತೋಲನ ಮಾಡುವುದು ಕಷ್ಟ ಸಾಧ್ಯ.
೫. ಕೊನೆಗೆ ಉಸಿರನ್ನು ಒಳಕ್ಕೆಳೆದು, ಕಾಲುಗಳನ್ನು ನೇರ ಮಾಡಿ, ನಿಲ್ಲಿಸಿ, ತೋಳುಗಳನ್ನು ಕೆಳಗಿಳಿಸಿ, ಮತ್ತೆ ತಡಾಸನದಲ್ಲಿ ನಿಂತು ವಿಶ್ರಮಿಸಿಕೊಳ್ಳಬೇಕು.
ಪರಿಣಾಮಗಳು :-
ಈ ಆಸನವು ಭುಜಗಳಲ್ಲಿ ಪೆಡಸುತನವನ್ನು ದೂಡಿ, ಕಾಲುಗಳಲ್ಲಿರುವ ಸಾಮಾನ್ಯ ನ್ಯೂನತೆಗಳನ್ನು ಸರಿಪಡಿಸಲು ಸಹಕಾರಿಯಾಗಿದೆ. ಅಲ್ಲದೆ ಕಾಲಹರಡು (ಗಿಣ್ಣು)ಗಳು ಈ ಆಸನಭ್ಯಾಸದಿಂದ ಬಲಗೊಂಡು, ಕಾಲಿನ ಮಾಂಸಖಂಡಗಳು ಸರಿಯಾದ ರೀತಿಯಲ್ಲಿ ಬೆಳೆಯುತ್ತದೆ. ಎದೆಯ ಭಾಗದಲ್ಲಿ ವಫೆಯೆಂಬ ಪೊರೆಯೂ ಮೇಲಕ್ಕುಬಿ ಎದೆಗೆ ಮೃದುವಾದ ಅಂಗಮರ್ದನದ ಸೌಲಭ್ಯ ಇದರಿಂದ ದೊರಕುತ್ತದೆ. ಇದರ ಜೊತೆಗೆ ಕಿಬ್ಬೊಟ್ಟೆಯಲ್ಲಡಕವಾಗಿರುವ ಅಂಗಗಳೂ ಮತ್ತು ಬೆನ್ನೂ ಹುರುಪುಗೊಳ್ಳುವವು ಹಾಗೂ ಎದೆಯ ಭಾಗವು ವಿಶಾಲವಾಗುವುದು. ಈ ಕಾರಣಗಳಿಂದ ಈ ಆಸನಾಭ್ಯಾಸವು ಕುದುರೆ ಸವಾರರಿಗೆ ಹೆಚ್ಚು ಉಪಯೋಗಿ.