ಮನೆ ಪ್ರವಾಸ ಮೈಸೂರು: ‘ಟೆಂಟ್ ಟೂರಿಸಂ’ ಗೆ ಲಲಿತ ಮಹಲ್ ಹೋಟೆಲ್ ಆವರಣ ಆಯ್ಕೆ

ಮೈಸೂರು: ‘ಟೆಂಟ್ ಟೂರಿಸಂ’ ಗೆ ಲಲಿತ ಮಹಲ್ ಹೋಟೆಲ್ ಆವರಣ ಆಯ್ಕೆ

0

ಮೈಸೂರು(Mysuru): ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಟೆಂಟ್ ಟೂರಿಸಂ ಪರಿಕಲ್ಪನೆ ಪರಿಚಯಿಸಲು ಪ್ರವಾಸೋದ್ಯಮ ಇಲಾಖೆ ಉದ್ದೇಶಿಸಿದ್ದು ಪರಿಣಾಮ ಹೆಸರಾಂತ ಪಾರಂಪರಿಕ ಲಲಿತ ಮಹಲ್ ಹೋಟೆಲ್ ಆವರಣ ಆಯ್ಕೆಮಾಡಲಾಗಿದೆ.

ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರು ಲಲಿತ ಮಹಲ್ ಹೋಟೆಲ್ ನ ಸುತ್ತಮುತ್ತ ಇರುವ 54 ಎಕರೆ ಪ್ರದೇಶದಲ್ಲಿ ಟೆಂಟ್ ಟೂರಿಸಂ ಪ್ರಾರಂಭಿಸಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಹೋಟೆಲ್ ಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಲಾಗಿದ್ದು ಹತ್ತಿರದ ದಿನಗಳಲ್ಲಿಯೇ ಯೋಜನೆಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ದೇಶದಾದ್ಯಂತ ಕೋವಿಡ್ ಸಂದರ್ಭದಲ್ಲಿ ಹೋಟೆಲ್ ಉದ್ಯಮಗಳು ಸಾಕಷ್ಟು ನಷ್ಟವನ್ನು ಅನುಭವಿಸಿದ್ದು ಆ ನಷ್ಟವನ್ನು ತುಂಬುವ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪಾರಂಪರಿಕ ಪ್ರವಾಸಿ ತಾಣಗಳಲ್ಲಿ ಟೆಂಟ್ ಟೂರಿಸಂ ಆರಂಭಿಸಲು ತಯಾರಿ ಮಾಡಿಕೊಂಡಿದ್ದಾರೆ.

ಏನಿದು ಟೆಂಟ್ ಟೂರಿಸಂ?

 ಧಾರ್ಮಿಕ ಸ್ಥಳಗಳು, ಪ್ರವಾಸಿ ತಾಣಗಳು, ಪ್ರಕೃತಿ ರಮಣೀಯ ಪ್ರದೇಶಗಳಿಗೆ ಹೋಗಿ ವಾಪಸ್ ವಾಸ್ತವಕ್ಕೆ ಬರುವ ವೇಳೆಗೆ ಹೋಟೆಲ್ ರೂಂಗಳು ಸಿಗುವುದು ಕಷ್ಟ. ಇಂತಹ ಸಂದರ್ಭಗಳಲ್ಲಿ ಹೋಟೆಲ್ ಮುಂಭಾಗದಲ್ಲಿ, ಪ್ರವಾಸಿ ತಾಣಗಳ ಸುರಕ್ಷಿತ ಸ್ಥಳಗಳಲ್ಲಿ ಟೆಂಟ್ ಹಾಕಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವುದೇ ಟೆಂಟ್ ಟೂರಿಸಂ ಆಗಿದೆ.

ಈ ಮೊದಲೇ ರಾಜಸ್ಥಾನದ ಅರಮನೆ ಬಳಿ ಟೆಂಟ್ ಟೂರಿಸಂ ಯಶಸ್ವಿಯಾಗಿ ಆರಂಭಗೊಂಡಿದ್ದು ಕೇರಳದ ಹಲವು ಪ್ರದೇಶಗಳಲ್ಲಿಯೂ ಕೂಡ ಯಶಸ್ವಿಯಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಪ್ರವಾಸಿಗರನ್ನು ಸೆಳೆಯಲು,  ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಟಿಸುವ ಸಲುವಾಗಿ ಟೆಂಟ್ ಟೂರಿಸಂ ಜಾರಿಗೆ ತರಲು ಮುಂದಾಗಿದ್ದಾರೆ.

ಹಿಂದಿನ ಲೇಖನಭಾವನಾತ್ಮಕ ಸ್ವಾತಂತ್ರ್ಯದಿಂದ ಸಂತೃಪ್ತಿ
ಮುಂದಿನ ಲೇಖನಹಣದ ವಿಚಾರಕ್ಕೆ ಜಗಳ: ಜಗಳ ಬಿಡಿಸಲು ಹೋದವನ ಕೊಲೆ