ಮನೆ ಅಪರಾಧ ಸುಂಟಿಕೊಪ್ಪದಲ್ಲಿ ಸರಣಿ ಕಳವು: ದೂರು ದಾಖಲು     

ಸುಂಟಿಕೊಪ್ಪದಲ್ಲಿ ಸರಣಿ ಕಳವು: ದೂರು ದಾಖಲು     

0
ಸಾಂದರ್ಭಿಕ ಚಿತ್ರ

ಸುಂಟಿಕೊಪ್ಪ: ಕಾಫಿ ಪುಡಿ ಅಂಗಡಿ ಹಾಗೂ ವಾಹನ ತರಬೇತಿ ಕೇಂದ್ರದ ಬೀಗ ಮುರಿದು ನುಗ್ಗಿ, ನಗದು ಹಾಗೂ ಮೊಬೈಲ್ ದೋಚಿ ಪರಾರಿಯಾಗಿರುವ ಪ್ರಕರಣ ವರದಿಯಾಗಿದೆ. 

ಶುಂಠಿಕೊಪ್ಪ ಹುಲುಗುಲಿ ರಸ್ತೆಯ ಶ್ರೀ ಚಾಮುಂಡೇಶ್ವರಿ ಕಾಫಿ ವರ್ಕ್ಸ್ ಗೆ ಬುಧವಾರ ರಾತ್ರಿ ವೇಳೆ ಬೀಗವನ್ನು ಮುರಿದು ಒಳನುಸುಳಿದ ಕಳ್ಳರು ನಗದು ಪೆಟ್ಟಿಗೆಯಲ್ಲಿದ್ದ 5000 ನಗದು ಹಾಗೂ ಅದರಲ್ಲಿದ್ದ ಬ್ಯಾಂಕ್ ಖಾತೆ ಪುಸ್ತಕಗಳನ್ನು ಆಪಹರಿಸಿದ್ದಾರೆ.

ನಂತರ ಅಲ್ಲಿಂದ ತೆರಳಿ ಕಳ್ಳರು ಅದೇ ರಸ್ತೆಯಲ್ಲಿದ್ದ ವೇದ ಮೋಟರ್ಸ್ ಡ್ರೈವಿಂಗ್ ಸ್ಕೂಲ್ ಗೆ ತೆರಳಿ ಬೀಗವನ್ನು ಮುರಿದು ಗಲ್ಲಾ ಪೆಟ್ಟಿಗೆಯನ್ನು ತೆಗೆಯಲಾಗದೆ ಅಲ್ಲಿದ್ದ ಮೊಬೈಲ್ ಅನ್ನು ಕದ್ದೋಯ್ದಿದ್ದಾರೆ. ಎಂದಿನಂತೆ ಬೆಳಗ್ಗೆ ಅಂಗಡಿ ಮಾಲೀಕರು ಮಳಿಗೆ ತೆರೆಯಲು ಮುಂದಾದಾಗ ಬೀಗ ಮುರಿದಿರುವುದು ಗೋಚರಿಸಿದೆ.

ಅಂಗಡಿ ಮಾಲೀಕರು ದೂರು ನೀಡಿದ ಹಿನ್ನೆಲೆ ಶುಂಠಿ ಕೊಪ್ಪ ಪೊಲೀಸರು ಅಂಗಡಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.