ಮನೆ ಜ್ಯೋತಿಷ್ಯ ಪೂರ್ವಾಷಾಢ ನಕ್ಷತ್ರ

ಪೂರ್ವಾಷಾಢ ನಕ್ಷತ್ರ

0

ಕ್ಷೇತ್ರ – ಧನು ರಾಶಿಯಲ್ಲಿ 13 ಡಿಗ್ರಿ 20 ಕಲೆಯಿಂದ 26 ಡಿಗ್ರಿ 40 ಕಲೆ, ರಾಶಿಸ್ವಾಮಿ – ಗುರು, ನಕ್ಷತ್ರಸ್ವಾಮಿ – ಶುಕ್ರ, ಗಣ – ಮನುಷ್ಯ, ಯೋನಿ – ವಾನರ, ನಾಡಿ – ಮಧ್ಯ, ನಾಮಾಕ್ಷರ – ಭೂ, ಥ, ಫಾ, ಢ. ಶರೀರಭಾಗ – ತೊಡೆಗಳು, ಯೋನಿ, ಬೆನ್ನಿನ ಭಾಗ, ಸೊಂಟ, ಧಮನಿಗಳು, ಪೃಷ್ಠ, ಸಂಚಾರಿ ಗ್ರಂಥಿಗಳು.

ರೋಗಗಳು :- ಗುಪ್ತರೋಗ, ವಿಕ್ಷಿಪ್ತತೆ, ಸಂಧಿವಾತ, ಪುಪ್ಪಸರೋಗ, ಕ್ಯಾನ್ಸರ್, ಶೀತ, ತ್ರಿದೋಷ, ರಕ್ತದೋಷ, ಮಂಡಿ ನೋವು, ವಿಕಲತೆ.

ಸಂರಚನೆ :- ಉದಾರ ಗುಣದ ದಾನಿ, ವಿಶಾಲ ದೃಷ್ಟಿಕೋನದ ವಿದ್ಯಾವಂತರಾಗುವರು, ಹಸನ್ಮುಖಿ, ಪ್ರಾಮಾಣಿಕ, ಸಹನಶೀಲ, ಆಶಾವಾದಿ, ಸಂವೇದನಾ ಶೀಲ,  ಖರ್ಚುಮಾಡುವವ, ಕಲಾ, ನಾಟ್ಯ ಪ್ರೇಮಿ, ಪಶು-ಪಕ್ಷಿಪಾಲಕ, ನದಿ ಸಾಗರ ತೀರದಲ್ಲಿರುವವನು, ಸತ್ಯಪ್ರಿಯ, ಪವಿತ್ರ ಉತ್ತಮ ಪತ್ನಿ ಉಳ್ಳವನು, ವಚನ ಬದ್ಧನಾಗಬಹುದಾಗಿದೆ.

ಉದ್ಯೋಗ, ವಿಶೇಷಗಳು :- ನ್ಯಾಯಾಧೀಶ, ವಕೀಲ, ಬ್ಯಾಂಕ್ ಉದ್ಯೋಗಿ, ಲೆಕ್ಕಪರೀಕ್ಷಕ, ನಿರ್ದೇಶಕ, ಹಣಕಾಸಿನ ಇಲಾಖೆ, ನೌಕರ, ಆಹಾರ ಪದಾರ್ಥ, ಸಕ್ಕರೆ ಮಿಠಾಯಿ ಸಂಬಂಧವಿರುವ, ಮಂದಿರ ರಸ್ತೆ, ವಿಮಾನ ಸಂಬಂಧವಿರುವ, ಪಶು ಚಿಕಿತ್ಸಕ, ಸಂಗೀತ, ಸಿನಿಮಾ, ಆಕಾಶವಾಣಿ, ಕಲಾಕಾರ, ನಟ, ವಿದೇಶಿ ವ್ಯಾಪಾರಿ, ಶೃಂಗಾರ ಸಾಮಗ್ರಿ, ವ್ಯಾಪಾರಿ, ಹೋಟೆಲ್ ವ್ಯವಸ್ಥಾಪಕ, ದೇಶಿಯ ಔಷಧ ಮಾರುವ, ಹೃದಯ ವೈದ್ಯ, ಸಮಾಜ ಕಲ್ಯಾಣ ಅಧಿಕಾರಿ ಆಗಬಹುದು.

ಬೃಹಸ್ಪತಿ ರಾಶಿಯಲ್ಲಿ ಶುಕ್ರನ ನಕ್ಷತ್ರದಲ್ಲಿ ಹುಟ್ಟಿದವರು ಸಾಮಾನ್ಯವಾಗಿ ಪ್ರಸಿದ್ಧಿ, ಗೌರವ ಪಡೆಯುತ್ತಾರೆ. ಅಲ್ಪಾಯು, ಏಕಾಂತ ಪ್ರಿಯರು, ಬಾಲ್ಯದಲ್ಲಿ ದುಃಖ ಅನುಭವಿಸಿ ಮಧ್ಯಾವಸ್ಥೆಯಲ್ಲಿ ಸುಖಿಯಾಗಿರುವವರು, ಸಂಗೀತಕಲಾ ನಿಪುಣ, ಮಾನಸಿಕ ರೋಗಿ, ಕಾರ್ಯಕುಶಲರಾಗುವವರು, ಗುರುದೆಶೆಯಲ್ಲಿ ಉತ್ತಮ ಸ್ಥಿತಿ ಉಂಟಾಗುವುದು, ಸೂರ್ಯನು ಈ ನಕ್ಷತ್ರದ ಮಾಘ ಮಾಸದಲ್ಲಿ 13 ದಿನವಿರುವನು.