ಮನೆ ರಾಜ್ಯ ಇಂದಿನಿಂದ ನ.20 ರವರೆಗೆ ಬಾಕಿ ಉಳಿದ ಪಡಿತರ ಕಾರ್ಡ್ ವಿತರಣೆ

ಇಂದಿನಿಂದ ನ.20 ರವರೆಗೆ ಬಾಕಿ ಉಳಿದ ಪಡಿತರ ಕಾರ್ಡ್ ವಿತರಣೆ

0

ಬೆಂಗಳೂರು: ಬಾಕಿ ಉಳಿದಿದ್ದ ಪಡಿತರ ಕಾರ್ಡ್​​​ ಗಳನ್ನು ಇಂದಿನಿಂದ ನವೆಂಬರ್​ 20ನೇ ತಾರೀಖಿನವರೆಗೂ ವಿತರಿಸಲಾಗುತ್ತದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2.96 ಲಕ್ಷ ಪಡಿತರ ಕಾರ್ಡ್​​ಗಳು ವಿತರಣೆಗೆ ಬಾಕಿ ಉಳಿದಿದ್ದವು. ಈ ಕಾರ್ಡ್​ ಗಳನ್ನು ಸದ್ಯ ಪರಿಶೀಲಿಸಲಾಗಿದ್ದು 2.96 ಲಕ್ಷ ಕಾರ್ಡ್​​ ಗಳ ಪೈಕಿ 2.78 ಕಾರ್ಡ್​ ಗಳ ಪರಿಶೀಲನೆ ನಡೆದಿದೆ. ದಾಖಾಲೆಗಳು ಸರಿ ಇಲ್ಲದ ಕಾರಣ 50 ಸಾವಿರ ಕಾರ್ಡ್ ​ಗಳನ್ನ ರದ್ದುಪಡಿಸಲಾಗಿದೆ. ಸದ್ಯ 2 ಲಕ್ಷದ 28 ಸಾವಿರ ಕಾರ್ಡ್​ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

ಪಡಿತರ ಕಾರ್ಡ್​ ದಾರರಿಗೆ ಆಹಾರ ಇಲಾಖೆಯಿಂದ ಸಂದೇಶ ರಾವಾನಿಸಲಾಗಿದ್ದು, ಒಟಿಪಿ ನಂಬರ್ ಪಡೆದು ತಾವೇ ಗೂಗಲ್ ​ನಲ್ಲಿ ಕಾರ್ಡ್​ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಅಪ್ರುವಲ್ ​ಗೆ ಅವಕಾಶ ನೀಡಲಾಗಿದೆ ಎಂದು ಆಹಾರ ಇಲಾಖೆ ಪ್ರಕಟಣೆ ಹೊರಡಿಸಿದೆ.

ಹಿಂದಿನ ಲೇಖನಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರದ ಟ್ರೈಲರ್‌ ಬಿಡುಗಡೆ
ಮುಂದಿನ ಲೇಖನಟಿ20 ವಿಶ್ವಕಪ್‌: ಅರ್ಹತೆ ಪಡೆದ ನೇಪಾಳ, ಒಮಾನ್