ಮನೆ ರಾಜ್ಯ ನ.24 ರಿಂದ 26ರವರೆಗೆ  ರಾಜ್ಯದಲ್ಲಿ ‘ಎಸ್ಕಾಂ’ ಆನ್ ಲೈನ್ ಸೇವೆ ಸ್ಥಗಿತ

ನ.24 ರಿಂದ 26ರವರೆಗೆ  ರಾಜ್ಯದಲ್ಲಿ ‘ಎಸ್ಕಾಂ’ ಆನ್ ಲೈನ್ ಸೇವೆ ಸ್ಥಗಿತ

0

ಬೆಂಗಳೂರು: ನವೆಂಬರ್​ 24ರಿಂದ ನವೆಂಬರ್ 26ರವರೆಗೆ ಎಸ್ಕಾಂ ಆನ್​ಲೈನ್​ ಸೇವೆ ಸ್ಥಗಿತಗೊಳ್ಳಲಿದೆ.

ನವೆಂಬರ್ 24ರಂದು ಮಧ್ಯಾಹ್ನ 12ರಿಂದ ನವೆಂಬರ್ 26ರ ಬೆಳಗ್ಗೆ 11.59ರವರೆಗೆ ಬಂದ್​ ಆಗಿರಲಿದೆ.

ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಬ್ ಪೋಟರ್ಲ್ ಗೆ ಸಂಬಂಧಿಸಿದಂತೆ ತುರ್ತು ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆ 2 ದಿನ ‘ಎಸ್ಕಾಂ’ ಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ. ವಿವಿಧ ಪೋರ್ಟಲ್ ಗಳಲ್ಲಿರುವ ಡಾಟಾವನ್ನು ನೂತನ ಪೋರ್ಟಲ್ ಗೆ ವರ್ಗಾವಣೆ ಮಾಡುವ ಕೆಲಸ ನಡೆಯುವ ಹಿನ್ನೆಲೆ ಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ.

2 ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಸೇವೆ ಇರಲ್ಲ ಎಂಬ ಮಾಹಿತಿ ಲಭ್ಯವಾಗಿದೆ.