ಮನೆ ಮನೆ ಮದ್ದು ಅಜೀರ್ಣ

ಅಜೀರ್ಣ

0

ಇದೊಂದು ಜಠರದ ಕಾಯಿಲೆ. ಅಲ್ಲಿ ಉತ್ಪತ್ತಿಯಾಗಬೇಕಿದ್ದ ಪಾಚಕ ಪಿತ್ತವು ಸಮರ್ಪಕವಾಗಿ ಉತ್ಪತ್ತಿಯಾಗಿ ಸ್ರವಿಸದೇ ಇರುವಾಗ ಈ ಅಜೀರ್ಣದೋಷ ಉಂಟಾಗುತ್ತದೆ. ಆಹಾರವು ಬಾಯಿಗೆ ಬಿದ್ದ ಮರುಕ್ಷಣದಲ್ಲಿಯೇ ಕೊಲ್ಲು ರಸವು ಸುರಿದು ಹಲ್ಲುಗಳಿಂದ ಗಟ್ಟಿ ಪದಾರ್ಥಗಳು ನುಣ್ಣಗೆ ಅರೆದು ಮುಂದೆ ಜಠರಕ್ಕೆ ಕಳಿಸಿರುತ್ತದೆ. ಆಗ ಅಲ್ಲಿ ಉತ್ಪತ್ತಿಯಾಗುವ ಜಠರ ರಸದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವು ಉತ್ಪತ್ತಿಯಾಗಿ ಕಿವಿಚುವಿಕೆಯಿಂದ ಆಹಾರದಲ್ಲಿ ಚೆನ್ನಾಗಿ ಮಿಶ್ರಣವಾಗಿ ಜೀರ್ಣಿಸಲು ಸಹಕರಿಸುತ್ತದೆ. ಈ ಕಾರ್ಯ ಸರಿಯಾಗಿ ಜರುಗದೆ ಇದ್ದಾಗ ಅಜೀರ್ಣವೆಂದು ಹೇಳುತ್ತಾರೆ. ಇದನ್ನೇ ಅಗ್ನಿಮಾಂದ್ಯ ಎಂದು ಹೇಳುವುದುಂಟು.


1 ಮನೆಯಲ್ಲೇ ಸಿಕ್ಕುವ ಹಸಿ ಶುಂಟಿ ರಸವನ್ನು ತಯಾರಿಸಿ, ಜೇನು ಬೆರೆಸಿ ಸೇವಿಸಿದರೆ ಅಗ್ನಿಮಾಂದ್ಯ ನಿವಾರಣೆಯಾಗುತ್ತದೆ.

  1. ಬೆಳಿಗ್ಗೆ ಎದ್ದ ತಕ್ಷಣ ಒಂದು ಲೀಟರ್ ಶುದ್ದವಾದ ನೀರನ್ನು ಕುಡಿದರೆ ಅಜೀರ್ಣ ನಿವಾರಣೆಯಾಗುವುದು.
  2. ಒಂದು ಲೋಟ ನೀರನ್ನು ಒಲೆಯ ಮೇಲಿಟ್ಟು ಬೆಲ್ಲ, ಸಣ್ಣ ಚಮಚ ಕಾಳು ಮೆಣಸಿನ ಪುಡಿ, ಹಾಕಿ ಕಾಯಿಸಿ ಮರಳುವಾಗ ಕೆಳಗಿಳಿಸಿ ಹಾಲು ಸೇರಿಸಿ ಕುಡಿಯುದರಿಂದ ಅಗ್ನಿಮಾಂದ್ಯ ನಿವಾರಣೆಯಾಗುತ್ತದೆ. ಇದೇ ಕಷಾಯ ಮಾಡುವಾಗ ಜೀರಿಗೆ ಪುಡಿ ಒಂದು ಚಮಚ ಸೇರಿಸಿದರೆ ಪಿತ್ತಶಮನವಾಗುತ್ತದೆ. ಇದೇ ಕಷಾಯಕ್ಕೆ ಶುಂಠಿ ರಸವನ್ನದರೂ, ಅರಿಶಿನದ ಪುಡಿಯನ್ನದರೂ ಸೇರಿಸಿ ಕುಡಿಯುವುದರಿಂದ ಅಜೀರ್ಣ ವ್ಯಾಧಿ ನಿವಾರಣೆಯಾಗುವುದು.
  3. ಊಟ ಮಾಡುವಾಗ ಮೊದಲನೆಯ ಅನ್ನಕ್ಕೆ ಹಿಂಗ್ವಷ್ಟಕ ಚೂರ್ಣವನ್ನು ತುಪ್ಪದೊಡನೆ ಸೇವಿಸಿ ಆನಂತರ ಊಟ ಮಾಡಿದರೆ ಆ ಜೀರ್ಣ ಪರಿಹಾರವಾಗುವುದು.
  4. ಅರ್ಧಲೋಟ ನೀರಿಗೆ ನಿಂಬೆರಸವನ್ನು ಹಾಕಿ, ಸಕ್ಕರೆ ಸೇರಿಸಿ ಕುಡಿಯುವುದರಿಂದ ಅಜೀರ್ಣ ಪರಿಹಾರವಾಗುವುದು.
  5. ಸಬ್ಬಸಿಗೆ ಬೀಜ 10 ಗ್ರಾಂ; ಲವಂಗ 5 ಗ್ರಾಂ; ಅಜವಾನ 10 ಗ್ರಾಂ; ಬೀಡಾ ಲವಣ 10 ಗ್ರಾಂ; ಒಣಶುಂಠಿ 10 ಗ್ರಾಂ; ಕಾಳು ಮೆಣಸು 5 ಗ್ರಾಂ; ಜೀರಿಗೆ 10 ಗ್ರಾಂ; ಸೋಂಪು ಕಾಳು 10 ಗ್ರಾಂ; ಇವುಗಳನ್ನ ಚೂರ್ಣಮಾಡಿ ನಿಂಬೆ ಹಣ್ಣಿನ ರಸದಲ್ಲಿ ಅರೆದು ಕಡಲೆಕಾಳಿನಷ್ಟು ಗುಳಿಗೆ ಮಾಡಿ ನೆರಳಲ್ಲಿ ಒಣಗಿಸಿ, ಊಟದ ನಂತರ ಎರಡು ಮಾತ್ರ ನೀರಿನಲ್ಲಿ ಸೇವಿಸಬೇಕು.
  6. ಕರಿಬೇವಿನ ಸೊಪ್ಪಿನ ಚಟ್ನಿ ಮಾಡಿ ಸೇವಿಸಲು ಅಜೀರ್ಣಹರವಾಗುವುದು.
  7. ದೊಡ್ಡಪತ್ರೆ ಸೊಪ್ಪಿನ ತಂಬುಳಿ ಮಾಡಿ ಸೇವಿಸಿದಲ್ಲಿ ಅಗ್ನಿಮಾಂದ್ಯ ನಿವಾರಣೆಯಾಗುವುದು.
  8. ಪುದಿನ ಸೊಪ್ಪಿನ ಚಟ್ನಿ, ಕೊತ್ತಂಬರಿ ಸೊಪ್ಪಿನ ಚಟ್ನಿ ತಯಾರಿಸಿ ಸೇವಿಸಲು ಅಜೀರ್ಣ ದೋಷ ನಿವಾರಣೆಯಾಗುವುದು.
  9. ನಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಹಾಕಿ ಕುಡಿದು ನಾಲ್ಕು ಗಂಟೆ ಬಿಟ್ಟು ಊಟ ಮಾಡಿದರೆ ಅಜೀರ್ಣ ದೋಷ ನಿವಾರಣೆ ಆಗುವುದು.