ಮನೆ ಯೋಗಾಸನ ವಾತಾಯನಾಸನ

ವಾತಾಯನಾಸನ

0

ʼವಾತಾಯನʼ ಎಂದರೆ ಕುದುರೆ. ಈ ಭಂಗಿಯು ಕುದುರೆಯ ಮುಖವನ್ನು ಹೋಲುವುದರಿಂದಲೇ ಈ ಆಸನಕ್ಕೆ ಈ ಹೆಸರು ಬಂದಿದೆ.

ಅಭ್ಯಾಸ ಕ್ರಮ :-

೧. ಮೊದಲು ನೆಲದ ಮೇಲೆ ಕುಳಿತು, ಡೆಪಾದವನ್ನು ಎಡತೊಡೆಯ ಮೂಲಕ್ಕೆ ಸೇರಿಸಬೇಕು. ಆಗ ಇದು ʼಅರ್ಧ ಪದ್ಮಾಸನʼವಾಗುತ್ತದೆ.

೨. ಬಳಿಕ ಕೈಗಳನ್ನು ಟೊಂಕಗಳ ಪಕ್ಕಕ್ಕೆ ಬರುವಂತೆ ನೆಲದ ಮೇಲಿಟ್ಟು ಉಸಿರನ್ನು ಹೊರಕ್ಕೆ ಬಿಟ್ಟು, ದೇಹದ ಮುಂಡಭಾಗವನ್ನು ನೆಲದಿಂದ ಮೇಲಕ್ಕಿಳಿಸಿ, ಎಡಮಂಡಿಯ ಬಳಿಯಿಟ್ಟು ಬಲತೊಡೆಯನ್ನು ನೆಲಕ್ಕೆ ಸಮಾನಾಂತರ ಮಾಡಬೇಕು.

೩.  ನಂತರ ವಸ್ತಿಕುಹರದ (pelvis) ಮುಂಗಡೆಗೆ ಜಗ್ಗಿಹಿಡಿದು ಎಡತೊಡೆಯನ್ನು ನೆಲಕ್ಕೆ ಲಂಬವಾಗಿ ನಿಲ್ಲಿ̧̧ಸಿ ಕೈಗಳನ್ನ ಮೇಲೆತ್ತಿ ಬೆನ್ನನ್ನು ನೇರಮಾಡಿ, ದೇಹವನ್ನು ಸಮತೋಲನದಲ್ಲಿ ನಿಲ್ಲಿಸಬೇಕು. ಸಮಾನತೋಲನದಲ್ಲಿ ನಿಲ್ಲಿಸುವಾಗ ಮುಂದಕ್ಕೆ ಬಾಗದೆ, ಬೆನ್ನನ್ನು ನೆಟ್ಟಗೆ ನಿಲ್ಲಿಸಬೇಕಾದದ್ದು ಅಗತ್ಯ.

೪. ಮೊಣಕೈಗಳನ್ನ ಬಗ್ಗಿಸಿ ತೋಳುಗಳನ್ನ ಎದೆಯ ಮಟ್ಟಕ್ಕೆ ಎತ್ತಿ ನಿಲ್ಲಿಸಿ, ಬಲಗೈ ಮೇಲ್ದೋಳಿನ ಹಿಂಭಾಗವನ್ನು ಅದರ ಮೊಣಕೈ ಬಳಿ ಎಡಗೈ ಮೇಲ್ದೋಳಿನ ಮುಂಭಾಗಕ್ಕೆ ಬರುವಂತೆ ಈ ಮೊಣಕೈ ಕೀಲಿನ ಮೇಲ್ಭಾಗದಲ್ಲಿಟ್ಟು ಅದಕ್ಕೆ ಒರಗಿಸಬೇಕು. ಆಮೇಲೆ ಮುಂಗೈಗಳೆರಡನ್ನೂ ಒಂದನ್ನೊಂದು ಸುತ್ತುವರಿವಂತೆ ಮಾಡಿ, ಅಂಗೈಗಳೆರಡನ್ನೂ ಜೋಡಿಸಬೇಕು. ಈ ಭಂಗಿಯ ಸ್ಥಿತಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಸಾಮಾನ್ಯವಾಗಿ ಉಸಿರಾಡುತ್ತಾ ನೆಲೆಸಬೇಕು.

೫. ಅನಂತರ ತೋಳುಗಳನ್ನು ಬೇರ್ಪಡಿಸಿ, ನೆಲದ ಮೇಲೆ ಕುಳಿತು, ಕಾಲುಗಳನ್ನು ನೀಡಲವಾಗಿ ಚಾಚಬೇಕು.

೬. ಈ ಆಸನಭಂಗಿಯನ್ನು ಇನ್ನೊಂದು ಕಡೆಯಲ್ಲಿಯೂ ಅಭ್ಯಾಸಿಸಬೇಕು. ಇಲ್ಲಿ ಬಲಪಾದವನ್ನು ಬಲತೊಡೆಯ ಮೂಲಕ್ಕೆ ಸೇರಿಸಿ, ಎಡಪಾದವನ್ನು ಬಗ್ಗಿಸಿದ ಬಲಮಂಡಿಯ ಬಳಿ ನೆಲದ ಮೇಲೂರಿ ಎಡತೋಳನ್ನು ಎದೆಯ ಮುಂಭಾಗದಲ್ಲಿರಿಸಿ, ಎಡತೊಡೆಯನ್ನು ನೆಲಕ್ಕೆ ಸಮಾನಂತರವಾಗಿ ಮಾಡಿ, ಸಮತೋಲನ ಸ್ಥಿತಿಯಲ್ಲಿ ನೆಲೆಸಬೇಕು, ಈ ಭಂಗಿಯ ಅಭ್ಯಾಸದ ಕಾಲು ಎರಡು ಕಡೆಗೂ ಸಮವಾಗಿರಬೇಕು, ಆ ಬಳಿಕ ಭಂಗಿಯನ್ನು ಇರಿಸಿ ನೆಲದ ಮೇಲೆ ವಿಶ್ರಮಿಸಿಕೊಳ್ಳಬೇಕು.

೭. ಮೊದಮೊದಲು ಸಮತೋಲನ ಸ್ಥಿತಿಗೆ ತರುವುದು ಕಷ್ಟವಾಗಿ ತೋರುವುದು. ಅಲ್ಲದೇ ಮಂಡಿಗಳಲ್ಲಿ ನೋವು ತಲೆದೋರುವುದು. ಅಭ್ಯಾಸ ಮಾಡುತ್ತಾ ಕ್ರಮೇಣ ನೋವು ಮಾಯವಾಗುತ್ತದೆ. ಸಮತೋಲನ ಸ್ಥಿತಿಯು ಸುಲಭವಾಗಿ ಕೈವಶವಾಗುತ್ತದೆ.

ಪರಿಣಾಮಗಳು :-

ಈ ಆಸನಭಂಗಿಯ ಅಭ್ಯಾಸದಿಂದ ಟೋಂಕದ ಕೀಲುಗಳೆಲ್ಲಾ ರಕ್ತಪರಿಚಲನೆ ಸರಿಯಾಗಿ ನಡೆಯುವಂತಾಗುವುದು ಮತ್ತು ಟೋಂಕಗಳಲ್ಲಿ ಮತ್ತು ತೊಡೆಗಳಲ್ಲಿಯ ಸಾಮಾನ್ಯ ವಕ್ರತೆಯನ್ನು ತಿದ್ದಿ ಸರಿಪಡಿಸುವುದು ಅಲ್ಲದೆ, ಈ ಭಂಗಿಯಾಭ್ಯಾಸವು ಬೆನ್ನೆಲುಬಿನ ತಳಗಿನ ತ್ರಿಕಾಸ್ಥಿತಿಯ ಭಾಗದಲ್ಲಿ (Sacroliac region) ಪಿಡಿಸುತವನ್ನು ಕೂಡ ನೀಗಿಸಲು ಸಹಾಯಕವಾಗುತ್ತದೆ.

ಹಿಂದಿನ ಲೇಖನಅಜೀರ್ಣ
ಮುಂದಿನ ಲೇಖನಹಾಸ್ಯ