ಮನೆ ರಾಜ್ಯ ಜನನ-ಮರಣ ನೋಂದಣಿಗೆ ನ್ಯಾಯಾಲಯಕ್ಕೆ ಅಲೆಯಬೇಕಾಗಿಲ್ಲ; ತಿದ್ದುಪಡಿ ಅಧಿಕಾರ ಉಪ ವಿಭಾಗಧಿಕಾರಿಗಳಿಗೆ ನೀಡಲು ನಿರ್ಧಾರ

ಜನನ-ಮರಣ ನೋಂದಣಿಗೆ ನ್ಯಾಯಾಲಯಕ್ಕೆ ಅಲೆಯಬೇಕಾಗಿಲ್ಲ; ತಿದ್ದುಪಡಿ ಅಧಿಕಾರ ಉಪ ವಿಭಾಗಧಿಕಾರಿಗಳಿಗೆ ನೀಡಲು ನಿರ್ಧಾರ

0

ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದೆ.

ಇನ್ಮುಂದೆ ಜನನ, ಮರಣ ನೋಂದಣಿಗೆ ನ್ಯಾಯಾಲಯಕ್ಕೆ ಅಲೆಯಬೇಕಾಗಿಲ್ಲ. ಜನನ-ಮರಣ ನೋಂದಣಿ ತಿದ್ದುಪಡಿ ಅಧಿಕಾರವನ್ನು ತಾಲೂಕು ಮಟ್ಟದ ಉಪ ವಿಭಾಗಧಿಕಾರಿಗಳಿಗೆ ನೀಡಲು ನಿರ್ಧರಿಸಲಾಗಿದೆ. ಜನನ-ಮರಣ ನೋಂದಣಿಯಲ್ಲಿ ವಿಳಂಬ ನೋಂದಣಿ ಹಾಗೂ ತಿದ್ದುಪಡಿ ಅಧಿಕಾರವನ್ನು ಉಪ ವಿಭಾಗಧಿಕಾರಿಗೆ ನೀಡಲಾಗಿದೆ.

ಜನನ, ಮರಣ ನೋಂದಣಿ ನಿಯಮಗಳು- 1999 ರ ನಿಯಮಗಳ ಪ್ರಕಾರ ವಿಳಂಬ ನೋಂದಣಿಗೆ ಸಾರ್ವಜನಿಕರು ಹಾಲಿ ಪಾವತಿಸುತ್ತಿರುವ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಜನನ, ಮರಣ ಘಟಿಸಿದ 21 ದಿನಗಳ ನಂತರ ಹಾಗೂ 30 ದಿನಗಳ ಒಳಗಾಗಿ ನೋಂದಾಯಿಸುವ ವಿಳಂಬ ನೋಂದಣಿಗೆ ಹಾಲಿ ಇರುವ ವಿಳಂಬ ಶುಲ್ಕವನ್ನು 2 ರೂಪಾಯಿ ಬದಲು 1000 ರೂಪಾಯಿಗೆ, 30 ದಿನಗಳ ನಂತರ ರೂಪಾಯಿ 5ರ ಬದಲು 200 ರೂಪಾಯಿಗೆ, 1 ವರ್ಷ ಬಳಿಕ ನೋಂದಣಿಗೆ 10 ರೂಪಾಯಿ ಬದಲು ಬದಲು 500 ರೂಪಾಯಿಗೆ ಶುಲ್ಕವನ್ನು ಪರಿಷ್ಕರಿಸಲಾಗಿದೆ.

ಈವರೆಗೆ ಜನನ, ಮರಣ ನೋಂದಣಿ ಕಾಯಿದೆ ಸೆಕ್ಷನ್ 12(3) ಅಡಿ ವಿಳಂಬ ತಿದ್ದುಪಡಿ ಸೇರಿದಂತೆ ಯಾವುದೇ ತಕರಾರುಗಳಿದ್ದರೂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅಥವಾ ಪ್ರೆಸಿಡೆನ್ಸ್ ಮ್ಯಾಜಿಸ್ಟ್ರೇಟ್ ಮಾತ್ರ ಆದೇಶ ಹೊರಡಿಸಬಹುದಾಗಿದ್ದು, ಬೇರೆ ಯಾರಿಗೂ ಅಧಿಕಾರ ಇರಲಿಲ್ಲ. ಆದರೆ ಮುಂದಕ್ಕೆ ಜನನ, ಮರಣನೋಂದಣಿಗೆ ನ್ಯಾಯಾಲಯಕ್ಕೆ ಅಲೆಯಬೇಕಾಗಿಲ್ಲ. ಜನನ-ಮರಣ ನೋಂದಣಿ ತಿದ್ದುಪಡಿ ಅಧಿಕಾರವನ್ನು ತಾಲೂಕು ಮಟ್ಟದ ಉಪ ವಿಭಾಗಧಿಕಾರಿಗಳಿಗೆ ನೀಡಲು ನಿರ್ಧರಿಸಲಾಗಿದೆ.