ಮನೆ ಜ್ಯೋತಿಷ್ಯ ಧನಿಷ್ಠಾ (ಪೂರ್ವಾರ್ಧ)

ಧನಿಷ್ಠಾ (ಪೂರ್ವಾರ್ಧ)

0

ಕ್ಷೇತ್ರ – ಮಕರ ರಾಶಿಯಲ್ಲಿ 23 ಡಿಗ್ರಿ 20 ಕಲೆಯಿಂದ 30 ಡಿಗ್ರಿವರೆಗೆ, ರಾಶಿಸ್ವಾಮಿ – ಶನಿ, ನಕ್ಷತ್ರಸ್ವಾಮಿ – ಮಂಗಳ, ಗಣ – ರಾಕ್ಷಸ, ನಾಡಿ – ಮಧ್ಯ, ಯೋನಿ – ಸಿಂಹ, ನಾಮಾಕ್ಷರ – ಗಾ, ಗೌ. ಶರೀರಭಾಗ -ಮೊಣಕಾಲ ಎಲುಬು, ಸಂಧಿವಾತ – ಕಾಲಿನೆ ಎಲವುಗಳು.

ರೋಗಗಳು :- ಕಾಲಿನಲ್ಲಿ ಗಾಯ, ಒಣಕೆಮ್ಮ, ಕುಂಟುತನ, ಅಂಗಚ್ಛೇದನ, ಗುಳ್ಳೆಗಳು, ಬಾವು, ಉಳುಕುವುದು.

ಸಂರಚನೆ :- ಇಚ್ಛಾಶಕ್ತಿಯಿರುವ, ವಂಚಕ, ಬಲಶಾಲಿ ಉದ್ದನೆಯ ಸಾಹಸಿ ವ್ಯಕ್ತಿಯಾಗಬಹುದಾಗಿದೆ. ಸಿಟ್ಟಿನವ, ಸ್ವಾರ್ಥಿ, ಹಿಂಸಕ, ನಿಯಂತ್ರಣರಹಿತ, ಉದಾರ, ವಚನಬದ್ಧ, ಸಂಗೀತ, ಕಲೆ, ಆಟಗಳಲ್ಲಿ ಆಸಕ್ತಿಯಿರುವ, ಕೂಟನೀತಿಜ್ಞ, ಪ್ರೇಮಿ, ನಪುಂಸಕ, ದೀರ್ಘಾಯು, ನಾಯಕನೂ ಆಗಬಹುದಾಗಿದೆ.      

ಉದ್ಯೋಗ, ವಿಶೇಷತೆಗಳು :- ಶಿಕಾರಿ ಮಾಡುವವ, ಲೋಹಕಾರ, ಇಂಜಿನಿಯರ್, ವಸ್ತು ಮಾರಾಟಗಾರ, ಪಶುಪಾಲಕ, ಸಾಧು, ಸನ್ಯಾಸಿ, ಕಟುಕ, ಎಲವುತಜ್ಞ, ವಾಹನ ಬಿಡಿಭಾಗಗಳ ಮಾರಾಟಗಾರ, ಮದಿರಾ ಸಿಮೆಂಟ್ ಮಾರಾಟಗಾರ, ಹವಾಮಾನತಜ್ಞ, ಪತ್ತೆದಾರ ಪೋಲಿಸ, ಪ್ರಾಮಾಣಿಕ, ಸಿಟ್ಟಿನವ, ಅಭಿಮಾನಿ, ಸ್ವಚ್ಛ ವಸ್ತ್ರಧರಿಸುವವರಾಗಬಹುದು. ಸೂರ್ಯನು ಈ ನಕ್ಷತ್ರ ಪಾದಗಳಲ್ಲಿ ಮಾಘ ಮಾಸದಲ್ಲಿ 6 ದಿನವಿರುವವನು. ಚಂದ್ರನು 12 ಗಂಟೆಯಿರು ವವನು.