ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗೀತಾ : ರೀ, ನನ್ನ ಮದುವೆಯಾದ್ರೆ ಕುಡಿಯೋದನ್ನ ಬಿಡ್ತೀರಾ ?

ರಾಜು : ಖಂಡಿತ ಬಿಡುತ್ತೇನೆ

ಗೀತಾ : ಸಿಗರೇಟ್ ಸೇದೋದನ್ನ ಬಿಡ್ತೀರಾ ?

ರಾಜು : ಅದನ್ನೂ ಬಿಡುತ್ತೀನಿ ಸರಿನಾ?

ಗೀತ :ಕುದುರೆ ಜೂಜಿಗೆ ಹೋಗೋದು?

ರಾಜು : ಅದನ್ನು ಬಿಡ್ತೀನಿ

ಗೀತಾ : ನಾನಿನ್ನೇನನ್ನೂ ಕೇಳೋದಿಲ್ಲ. ಏನೇನು ಬಿಡ್ತೀರಿ ಅನ್ನೋದನ್ನ ನೀವೇ ಹೇಳಿ.

ರಾಜು : ಮೊದಲು ನಿನ್ನ ಮದುವೆಯಾಗುವ ವಿಚಾರವನ್ನೇ ಬಿಡ್ತೀನಿ.

***

ನ್ಯಾಯಾಧೀಶ : ನೀನು ಮೊದಲು ಕಳ್ಳತನ ಎಲ್ಲಿ ಮಾಡಿದೆ ?

ಕಳ್ಳ : ದೇವಾಲಯದಿಂದ ಮಹಾಸ್ವಾಮಿ

ನ್ಯಾಯಾಧೀಶ : ದೇವಾಲಯದಿಂದಲೇ ಏಕೆ ಪ್ರಾರಂಭಿಸಿದೆ ?

ಕಳ್ಳ : ಯಾರು ಏನೇ ಪ್ರಾರಂಭ ಮಾಡಿದರೂ ಮೊದಲು ದೇವರ ಪೂಜೆಯಿಂದ ತಾನೇ ? ನಾನು ಹಾಗೆ ದೇವರಿಗೆ ಕೈಮುಗಿದೆ ಈ ಕೆಲಸ ಅಲ್ಲಿಂದಲೇ ಪ್ರಾರಂಭಿಸಿದೆ.

***

ರಾಜು : ಲೋ ಕಿಟ್ಟು, ಇವತ್ತೇನಾಯ್ತು ಅಂತೀಯಾ?

ಕಿಟ್ಟು : ಏನಾಯ್ತು ?

ರಾಜು : ಟಿವಿ ನೋಡ್ತಾ ಇದ್ದೆ ಸಡನ್ ಆಗಿ ಕರೆಂಟ್ ಹೊರಟು ಹೋಯಿತು.

ಕಿಟ್ಟು : ಆಮೇಲೆ ಏನ್ ಮಾಡ್ದೆ ?

ರಾಜು : ಕ್ಯಾಂಡಲ್ ಹಚ್ಕೊಂಡು ಟಿವಿ ನೋಡ್ದೆ.

ಹಿಂದಿನ ಲೇಖನಅಚ್ಯುತನೊಲಿದರೆ ಚಂದವೋ
ಮುಂದಿನ ಲೇಖನಧನಿಷ್ಠಾ (ಪೂರ್ವಾರ್ಧ)