ಮನೆ ಅಪರಾಧ ಕಲ್ಲಿದ್ದಲು ಅಕ್ರಮ ಸಾಗಾಟ ಪ್ರಕರಣ: ರೈಲ್ವೆ ಸ್ಟೇಷನ್ ಮಾಸ್ಟರ್, ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು

ಕಲ್ಲಿದ್ದಲು ಅಕ್ರಮ ಸಾಗಾಟ ಪ್ರಕರಣ: ರೈಲ್ವೆ ಸ್ಟೇಷನ್ ಮಾಸ್ಟರ್, ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು

0

ರಾಯಚೂರು: ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸೇರಿದ ಕಲ್ಲಿದ್ದಲು ಅಕ್ರಮ ಸಾಗಾಟ ಪ್ರಕರಣ ಸಂಬಂಧ KPTCL ತನಿಖಾ ಸಮಿತಿ ಪರಿಶೀಲನೆ ವೇಳೆ ಕಲ್ಲಿದ್ದಲು ಕಳ್ಳತನ ಬಯಲಾಗಿದೆ.

ಸದ್ಯ ಗುತ್ತಿಗೆದಾರ ಶ್ರೀನಿವಾಸುಲು ಹಾಗೂ ಯರಮರಸ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ.

 ಆರ್‌ ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳಿಗೆ ಸರಬರಾಜು ಮಾಡುವ ಕಲ್ಲಿದ್ದಲು ಅನಧಿಕೃತ ಜಾಗದಲ್ಲಿ ಸಂಗ್ರಹವಾಗಿದ್ದ ಸ್ಥಳಕ್ಕೆ ತನಿಖಾ ತಂಡದ ಅಧಿಕಾರಿ ಯತಿರಾಜ್ ರಘುನಾಥ, ಅಜಯ ಮತ್ತು ಕೃಷ್ಣಾಮೂರ್ತಿ ಅವರು ಭೇಟಿ ನೀಡಿ ಪರಿಶೀಲಿಸಿದ್ದು ಅಕ್ರಮ ಬಯಲಾಗಿದೆ.

ಯರಮರಸ್ ವಿದ್ಯುತ್ ಉತ್ಪಾದನಾ ಘಟಕದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಂದ್ರ ಅವರು ರಾಯಚೂರು ಗ್ರಾಮೀಣ ಠಾಣೆಗೆ ಕಲ್ಲಿದ್ದಲು ಕಳ್ಳತನದ ಬಗ್ಗೆ ದೂರು ನೀಡಿದ್ದರು. ಇನ್ನು ಆರ್‌ ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳಿಗೆ ಸರಬರಾಜು ಮಾಡುವ ಕಲ್ಲಿದ್ದಲು ಅನಧಿಕೃತ ಜಾಗದಲ್ಲಿ ಸಂಗ್ರಹವಾಗಿದ್ದ ಸ್ಥಳಕ್ಕೆ ತನಿಖಾ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಅಕ್ರಮ ಬಯಲಾಗಿದೆ.