ಮನೆ ರಾಜ್ಯ ನವಿಲುಗರಿಗೆ ವಿನಾಯಿತಿ ನೀಡಲಾಗಿದೆ: ಸಚಿವ ಈಶ್ವರ ಖಂಡ್ರೆ

ನವಿಲುಗರಿಗೆ ವಿನಾಯಿತಿ ನೀಡಲಾಗಿದೆ: ಸಚಿವ ಈಶ್ವರ ಖಂಡ್ರೆ

0

ಬೆಂಗಳೂರು: ನವಿಲುಗಳಿಂದ ನೈಸರ್ಗಿಕ ವಾಗಿ ಉದುರಿದ ಗರಿಗಳನ್ನು ಸಂಗ್ರಹಿಸುವುದು, ದೇಶದೊಳಗೆ ಮಾರುವುದು ಕಾನೂನುಬಾಹಿರ ಅಲ್ಲ. ಈ ಬಗ್ಗೆ ವನ್ಯಜೀವಿ ಸಂರಕ್ಷಣ ಕಾಯ್ದೆ ಸೆಕ್ಷನ್‌ 43ರ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನವಿಲು ಗರಿಗಳಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ರಫ್ತು ಮಾಡುವುದನ್ನು ಭಾರತ ಸರಕಾರ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಅಂತಾ ರಾಷ್ಟ್ರೀಯ ವ್ಯಾಪಾರದ ಸಮಾವೇಶ – ಸಿಐಟಿಇಎಸ್‌ ನಿಷೇಧಿಸಿದೆ. ನವಿಲುಗಳಿಗೆ ಹಿಂಸೆ ನೀಡಿ ಗರಿ ಕಿತ್ತರೆ ಅದು ಶಿಕ್ಷಾರ್ಹ ಅಪರಾಧ ಎಂದಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳ ಅಮಾನತು ಸೂಚನೆ ಬಗ್ಗೆ ಮಾತನಾಡಿದ ಅವರು, ಅಧಿಕಾರಿಗಳೇ ವನ್ಯ ಜೀವಿಗಳ ಉತ್ಪನ್ನ ಬಳಕೆ ಮಾಡುತ್ತಿದ್ದಾರೆ ಎಂದಾದರೆ ಅಕ್ಷಮ್ಯ ಅಪರಾಧ ಎಂದರು.

ಹಿಂದಿನ ಲೇಖನಅಮೇರಿಕಾ: 18 ಜನರನ್ನು ಕೊಂದಿದ್ದ ಶಂಕಿತ ವ್ಯಕ್ತಿ ಶವವಾಗಿ ಪತ್ತೆ
ಮುಂದಿನ ಲೇಖನಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಆರೋಪಿಗಳ ಸುಳಿವು ನೀಡಿದವರಿಗೆ 2 ಲಕ್ಷ ರೂ ಬಹುಮಾನ