ಮನೆ ಅಪರಾಧ ನವಜಾತ ಶಿಶು ಮಾರಾಟ ಪ್ರಕರಣ: ನಕಲಿ ವೈದ್ಯ ಸೇರಿ ಮತ್ತಿಬ್ಬರ ಬಂಧನ

ನವಜಾತ ಶಿಶು ಮಾರಾಟ ಪ್ರಕರಣ: ನಕಲಿ ವೈದ್ಯ ಸೇರಿ ಮತ್ತಿಬ್ಬರ ಬಂಧನ

0

ಬೆಂಗಳೂರು: ಆರ್​.ಆರ್.ನಗರದಲ್ಲಿ 20 ದಿನಗಳ ನವಜಾತ ಶಿಶು ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದ ಏಜೆಂಟ್ ಆಗಿದ್ದ ಮಹಿಳಾ ಆರೋಪಿ ರಮ್ಯಾಳನ್ನು ಹೆಬ್ಬಾಳದಲ್ಲಿ ಹಾಗೂ ರಾಜಾಜಿನಗರದಲ್ಲಿ ನಕಲಿ ವೈದ್ಯ ಕೆವಿನ್ ​ನನ್ನು ಅರೆಸ್ಟ್ ಮಾಡಲಾಗಿದೆ.

ಹಸುಗೂಸು ಮಾರಾಟ ಗ್ಯಾಂಗ್​ ಗೆ ಮಗುವನ್ನು ಮಾರಿದ್ದ ರಮ್ಯಾಳನ್ನು ಹೆಬ್ಬಾಳದಲ್ಲಿ ಬಂಧಿಸಲಾಗಿದೆ. ರಮ್ಯಾಳ ಸಂಬಂಧಿ ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದಳು. ಅಬಾರ್ಷನ್ ​​ಗೆ ಓಡಾಡುತ್ತಿದ್ದ ಯುವತಿಯನ್ನು ರಮ್ಯಾ ಆರೈಕೆ ಮಾಡಿದ್ದಳು. ಆಕೆಯನ್ನು 9 ತಿಂಗಳು ಜೋಪಾನ ಮಾಡಿ ಮಗುವನ್ನು ಪಡೆದುಕೊಂಡಿದ್ದಳು. ಬಳಿಕ ಇದೇ ಗ್ಯಾಂಗ್​​​ ಜೊತೆ ಸೇರಿ ಮಗುವನ್ನು ಮಾರಾಟ ಮಾಡಿದ್ದಳು. ಮಗು ಹೆತ್ತುಕೊಟ್ಟಿದ್ದಕ್ಕೆ ಸಂಬಂಧಿ ಯುವತಿಗೆ ರಮ್ಯಾ ಹಣ ನೀಡಿದ್ದಳು. ನಂತರ ಹೊಸ ವರನನ್ನು ನೋಡಿ ಯುವತಿಗೆ ಮದುವೆ ಕೂಡ ಮಾಡಿಸಿದ್ದಳು. ಸದ್ಯ ಮಗು ಮಾರಾಟ ಕೇಸ್​ ನಲ್ಲಿ ಇತರೆ ಆರೋಪಿಗಳು ರಮ್ಯಾಳ ಹೆಸರು ಬಾಯ್ಬಿಟ್ಟಿದ್ದರು. ಹೆಬ್ಬಾಳದಲ್ಲಿ ರಮ್ಯಾಳನ್ನ ಅರೆಸ್ಟ್ ಮಾಡಲಾಗಿದೆ. ಇದೀಗ ಈ ಪ್ರಕರಣದಲ್ಲಿ ಒಟ್ಟಾರೆಯಾಗಿ 11 ಆರೋಪಿಗಳನ್ನು ಬಂಧಿಸಲಾಗಿದೆ. ಮೊದಲು ಅರೆಸ್ಟ್ ಆದ ನಾಲ್ವರು ಆರೋಪಿಗಳನ್ನ ಜೈಲಿಂದ ಕಸ್ಟಡಿಗೆ ಪಡೆದುಕೊಳ್ಳಲು ಸಿಸಿಬಿ ತಯಾರಿ ನಡೆಸಿದೆ.

ಇನ್ನು ಬೆಂಗಳೂರಿನಲ್ಲಿ ಹಸುಗೂಸುಗಳ ಮಾರಾಟ ಜಾಲ ಪತ್ತೆ ಪ್ರಕರಣ ಸಂಬಂಧ ಓರ್ವ ನಕಲಿ ವೈದ್ಯನ​ನ್ನು ಸಿಸಿಬಿ ಪೊಲೀಸರು ರಾಜಾಜಿನಗರದಲ್ಲಿ ಬಂಧಿಸಿದ್ದಾರೆ. ಎಂಬಿಬಿಎಸ್ ಉತ್ತೀರ್ಣ ಆಗದಿದ್ರೂ ನಕಲಿ ವೈದ್ಯ ಕೆವಿನ್ ಕ್ಲಿನಿಕ್ ನಡೆಸುತ್ತಿದ್ದ. ಡಾಕ್ಟರ್ ಕೆವಿನ್ ಅಂತಾ ಬೋರ್ಡ್ ಹಾಕಿಕೊಂಡಿದ್ದ. ಅಲ್ಲದೆ ರೋಗಿಗಳಿಗೆ ಟ್ರೀಟ್ ​ಮೆಂಟ್ ಸಹ ನೀಡುತ್ತಿದ್ದ. ಕೆವಿನ್ ಹಸುಗೂಸು ಮಾರಾಟ ಮಾಡಿದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಆತನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.