ಮಂಡ್ಯ:ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯದ ಹಿತ ಕಾಪಾಡದ ಕೇಂದ್ರ – ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸರದಿ ಉಪವಾಸ ಎಂಟನೇ ದಿನವೂ ಮುಂದುವರೆದಿದೆ.
ನಗರದ ಸರ್.ಎಂ.ವಿ.ಪ್ರತಿಮೆ ಎದುರು ಸರದಿ ಉಪವಾಸದಲ್ಲಿ ಜೈ ಕರ್ನಾಟಕ ಪರಿಷತ್ ನ ಮುಖಂಡರು ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.
ಜೈ ಕರ್ನಾಟಕ ಪರಿಷತ್ ನ ರಾಜ್ಯಾದ್ಯಕ್ಷ ಎಸ್.ನಾರಾಯಣ್, ಪ್ರಜ್ವಲ್ ಹೊಸ ಬೂದನೂರು, ಮಂಡ್ಯದ ಸುಭಾಷ್ ನಗರದ ಲೋಹಿತ್, ರಾಜಕುಮಾರ್ ಬಡಾವಣೆಯ ಸಿ.ಸ್ವಾಮಿ, ಎ.ಆರ್. ಚಂದ್ರೇಶ್ ಅಣ್ಣೂರು, ಮ್ಯಾತ್ಯು,ಅರುಣ್ ಕುಮಾರ್ ಕಾರಸವಾಡಿ ಭಾಗಿಯಾಗಿದ್ದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಆಳುವ ಸರ್ಕಾರಗಳು ರೈತರ ನಿರಂತರ ದ್ರೋಹ ಮಾಡಿಕೊಂಡು ಬರುತ್ತಿವೆ, ಕೃಷ್ಣರಾಜಸಾಗರದಿಂದ ಈಗಲೂ ಸಹ ನೀರು ಬಿಡುವ ಮೂಲಕ ರೈತರ ಹಿತ ನಿರ್ಲಕ್ಷ್ಯ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಪ್ರತಿಪಕ್ಷ ಧ್ವನಿ ಎತ್ತಲಿ
ಜಿಲ್ಲಾ ರೈತ ಹಿತರಕ್ಷಣ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಪ್ರತಿ ಪಕ್ಷಗಳು ಕಾವೇರಿ ವಿಚಾರವಾಗಿ ದನಿ ಎತ್ತಬೇಕು, ಇಲ್ಲಿಯವರೆಗೆ ರೈತರು,ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಬಿಜೆಪಿ- ಜಾತ್ಯತೀತ ಜನತಾದಳ ಪಕ್ಷದವರು ಬೀದಿಯಲ್ಲಿ ಹೋರಾಟ ಮಾಡಿದ್ದೀರಿ, ಆಡಳಿತ ಪಕ್ಷ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಮರೆತಿರುವುದರಿಂದ ಸದನದಲ್ಲಿ ಪ್ರತಿ ಪಕ್ಷಗಳ ಪಾತ್ರ ದೊಡ್ಡದಾಗಿದ್ದು,ಕಾವೇರಿ ಪರ ದನಿ ಎತ್ತುವ ಮೂಲಕ ಕನ್ನಡ ನಾಡಿನ ಹಿತ ಕಾಪಾಡಲಿ ಎಂದರು.
ಅಧಿವೇಶನದಲ್ಲಿ ಸರ್ಕಾರ ಏನು ಮಾಡಲಿದೆ ಎಂಬುದು ಅವರಿಗೆ ಬಿಟ್ಟದ್ದು, ಜನತೆ ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ, ಸರ್ಕಾರ ಕಾವೇರಿ ವಿಷಯದಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ, ಸರ್ಕಾರ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲಿದೆಯಾ ನೋಡೋಣ ಎಂದು ಹೇಳಿದರು.
ಮೇಕೆದಾಟು ವಿಚಾರದಲ್ಲಿ ಕರ್ನಾಟಕ ಗಡಿ ಭಾಗದಲ್ಲಿ ಯಾವುದೇ ಯೋಜನೆ ರೂಪಿಸಬಾರದು ಎಂದು ತಮಿಳುನಾಡು ತಕರಾರು ಮಾಡಿದ್ದು ಆದರೆ ಅವರ ಗಡಿ ಭಾಗದಲ್ಲಿ ಯೋಜನೆ ಮಾಡಬಹುದಂತೆ, ಇಂತಹ ಇಬ್ಬಗೆ ನೀತಿ ವಿರುದ್ಧ ರಾಜ್ಯ ಸರ್ಕಾರ ಮೇಕೆದಾಟು ಅಡ್ಡಿ ಆತಂಕ ಹೋಗಲಾಡಿಸಿ ಯೋಜನೆ ಕೈಗೊತ್ತಿಕೊಳ್ಳಬೇಕು ಎಂದು ಹೇಳಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ ನ್ಯಾಯ ಪರ ಧೋರಣೆ ಅನುಸರಿಸದೆ ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್, ಹುರುಗಲವಾಡಿ ರಾಮಯ್ಯ,ಮಂಜುಳಾ, ಎಂ.ಎಲ್. ತುಳಸೀದರ್,ಮಲ್ಲೇಶ್ ನೇತೃತ್ವ ವಹಿಸಿದ್ದರು